ಪ್ರಜಾಪ್ರಭುತ್ವ ಸರ್ಕಾರ ಇಲ್ಲ, ಷರಿಯಾ ಕಾನೂನುಗಳೇ ಜಾರಿ – ತಾಲಿಬಾನ್

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರದ ಕಾನೂನು ಜಾರಿಯಾಗುವುದಿಲ್ಲ. ಷರಿಯಾ ಕಾನೂನುಗಳೇ ಜಾರಿಯಾಗಲಿದೆ ಎಂದು ತಾಲಿಬಾನ್ ಹೇಳಿದೆ.

ಪ್ರಜಾಪ್ರಭುತ್ವ ಸರ್ಕಾರ ಬೀಳಿಸಿದ ಬಳಿಕ ನಾವು ಬದಲಾಗಿದ್ದೇವೆ ಎಂದು ಹೇಳಿದ್ದ ತಾಲಿಬಾನ್ ಈಗ ನಾವು ಷರಿಯಾ ಕಾನೂನುಗಳನ್ನೇ ಜಾರಿ ಮಾಡುತ್ತೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಉಗ್ರರಿಗೆ ಆಟ, ಮಹಿಳೆಯರಿಗೆ ಪ್ರಾಣ ಸಂಕಟ – ಷರಿಯತ್ ಏನು ಹೇಳುತ್ತದೆ? ತಾಲಿಬಾನ್ ಕಾನೂನು ಏನು? 

ಮಾಧ್ಯಮಕ್ಕೆ ಸಂದರ್ಶನ ನೀಡಿದ ತಾಲಿಬಾನ್ ಮುಖಂಡ ವಹಿದುಲ್ಲಾ ಹಶೆಮಿ, ಅಫ್ಘಾನಿಸ್ತಾನದಲ್ಲಿ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದಿಲ್ಲ. ಯಾಕೆಂದರೆ ನಮ್ಮ ದೇಶದಲ್ಲಿ ಅದಕ್ಕೆ ಯಾವುದೇ ನೆಲೆ ಇಲ್ಲ. ದೇಶದಲ್ಲಿ ಷರಿಯಾ ಕಾನೂನು ಅನ್ವಯವಾಗಲಿದೆ ಎಂದು ಹೇಳಿದ್ದಾನೆ.

ಅಫ್ಘಾನಿಸ್ತಾನದಲ್ಲಿ ಯಾವ ರೀತಿಯ ರಾಜಕೀಯ ವ್ಯವಸ್ಥೆ ಇರಬೇಕು ಎಂಬುದರ ಬಗ್ಗೆ ನಾವು ಯಾವುದೇ ಚರ್ಚೆ ಮಾಡುವುದಿಲ್ಲ. ಈಗಾಗಲೇ ಷರಿಯಾ ಕಾನೂನು ಜಾರಿಗೆ ತರುವ ಬಗ್ಗೆ ನಿರ್ಧಾರ ಸ್ಪಷ್ಟವಾಗಿದೆ ಎಂದಿದ್ದಾನೆ. ಇದನ್ನೂ ಓದಿ: 1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ


ಈ ವೇಳೆ ತನ್ನದೇ ಆದ ಸೇನೆಯನ್ನು ಸರ್ಕಾರ ಸ್ಥಾಪಿಸಲಿದೆ. ಈಗಾಗಲೇ ಸರ್ಕಾರದಲ್ಲಿದ್ದ ಸೈನಿಕರ ಪೈಕಿ ಹೆಚ್ಚಿನವರು ಟರ್ಕಿ, ಜರ್ಮನಿ ಮತ್ತು ಇಂಗ್ಲೆಂಡ್‍ನಲ್ಲಿ ತರಬೇತಿ ಪಡೆದಿದ್ದಾರೆ. ಅವರು ಮತ್ತೆ ಸೇನೆಗೆ ಸೇರುವಂತಾಗಲು ನಾವು ಮಾತನಾಡಲಿದ್ದೇವೆ. ಹತ್ತಿರದ ರಾಷ್ಟ್ರಗಳಲ್ಲಿ ಲ್ಯಾಂಡ್ ಆಗಿರುವ ನಮ್ಮ ದೇಶದ ವಾಯುಸೇನಾ ವಿಮಾನಗಳನ್ನು ಆ ರಾಷ್ಟ್ರಗಳು ಶೀಘ್ರವೇ ನಮಗೆ ಹಸ್ತಾಂತರ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ವಹಿದುಲ್ಲಾ ಹಶೆಮಿ ಹೇಳಿದ್ದಾನೆ. ಇದನ್ನೂ ಓದಿ: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ: ಅಫ್ಘಾನಿಸ್ತಾನದ ಮಹಿಳಾ ಮೇಯರ್

ತಾಲಿಬಾನ್ ಆಕ್ರಮಣಕ್ಕೆ ಬೆದರಿ ಕಳೆದ ವಾರ 22 ಮಿಲಿಟರಿ ವಿಮಾನಗಳು, 24 ಹೆಲಿಕಾಪ್ಟರ್ ಗಳ ಮೂಲಕ ನೂರಕ್ಕೂ ಅಧಿಕ ಅಫ್ಘಾನ್ ಸೈನಿಕರು ಉಜ್ಬೇಕಿಸ್ತಾನಕ್ಕೆ ಪಲಾಯನ ಮಾಡಿದ್ದರು.

Comments

Leave a Reply

Your email address will not be published. Required fields are marked *