ಮಧ್ಯಪ್ರದೇಶದಲ್ಲಿ ಹಿಜಬ್‌ ವಿವಾದ ಇಲ್ಲ, ನಿಷೇಧ ಪ್ರಸ್ತಾಪವೂ ಇಲ್ಲ: ಗೃಹ ಸಚಿವ

ಭೋಪಾಲ್: ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವು, ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್‌ ಧರಿಸುವುದನ್ನು ನಿಷೇಧಿಸುವ ಪ್ರಸ್ತಾಪವನ್ನು ಪರಿಗಣಿಸುತ್ತಿಲ್ಲ ಎಂದು ಬುಧವಾರ ತಿಳಿಸಿದೆ.

ಮಧ್ಯಪ್ರದೇಶದಲ್ಲಿ ಹಿಜಬ್‌ ಕುರಿತು ಯಾವುದೇ ವಿವಾದ ಇಲ್ಲ. ಹಿಜಬ್‌ ನಿಷೇಧಿಸುವ ಸಂಬಂಧ ಯಾವುದೇ ಪ್ರಸ್ತಾವನೆ ಪರಿಗಣಿಸುತ್ತಿಲ್ಲ. ಈ ಸಂಬಂಧ ಯಾವುದೇ ಗೊಂದಲ ಬೇಡ ಎಂದು ಗೃಹ ಸಚಿವ ನರೋತ್ತಮ್‌ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಪರಿಸ್ಥಿತಿ ಬಿಗಡಾಯಿಸಲು ಕಾಂಗ್ರೆಸ್ ನಾಯಕರು ಕಾರಣ: ಬಿಸಿ ನಾಗೇಶ್

ಮಧ್ಯಪ್ರದೇಶದ ಶಿಕ್ಷಣ ಸಚಿವ ಇಂದರ್‌ ಸಿಂಗ್‌ ಪರ್ಮರ್‌ ಅವರು ಹಿಜಬ್‌ ವಿರೋಧಿ ಪ್ರತಿಭಟನಾಕಾರರನ್ನು ಬೆಂಬಲಿಸಿ, ಹಿಜಬ್‌ ನಿಷೇಧ ಕುರಿತು ನಿನ್ನೆ ಮಾತನಾಡಿದ್ದರು. ಆದರೆ ಇಂದು ಈ ಸಂಬಂಧ ಯಾವುದೇ ಪ್ರಸ್ತಾಪ ಪರಿಗಣಿಸುವುದಿಲ್ಲ ಎಂದು ಸಚಿವ ಮಿಶ್ರಾ ಅವರು ಸ್ಪಷ್ಟಪಡಿಸಿದ್ದಾರೆ.

ನಂತರ ಪ್ರತಿಕ್ರಿಯಿಸಿರುವ ಇಂದರ್‌ ಸಿಂಗ್‌, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಹೊಸ ಸಮವಸ್ತ್ರ ನಿಯಮವನ್ನು ನಾವು ಅಳವಡಿಸುತ್ತಿಲ್ಲ. ಈಗಿರುವ ಸಮವಸ್ತ್ರ ನಿಯಮವೇ ರಾಜ್ಯದಲ್ಲಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟೋಪಿ ಧರಿಸಿ ಸಂಸತ್ತಿಗೆ ಹೋಗಬಹುದು ಎಂದರೆ ಹಿಜಬ್ ಯಾಕೆ ಧರಿಸಬಾರದು: ಓವೈಸಿ

ಉಡುಪಿಯ ಕಾಲೇಜೊಂದರಲ್ಲಿ ಹಿಜಬ್‌-ಕೇಸರ ಶಾಲು ವಿವಾದ ಹುಟ್ಟುಕೊಂಡಿದ್ದು, ಈಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಹಿಜಬ್‌-ಕೇಸರಿ ಶಾಲು ವಿವಾದ ಭುಗಿಲೆದ್ದಿದೆ. ಈ ಸಂಬಂಧ ಪರ-ವಿರೋಧದ ಚರ್ಚೆಯಾಗುತ್ತಿದೆ. ವಿವಾದ ಸದ್ಯ ಹೈಕೋರ್ಟ್‌ ಅಂಗಳದಲ್ಲಿದ್ದು, ಇನ್ನಷ್ಟೇ ತೀರ್ಪು ಹೊರಬೀಳಬೇಕಾಗಿದೆ.

Comments

Leave a Reply

Your email address will not be published. Required fields are marked *