ಸಚಿವ ಸ್ಥಾನದ ಕನಸು ಕಾಣ್ತಿದ್ದವರಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್

– ಅಕ್ಟೋಬರ್ 3ರ ನಂತರ ಸಂಪುಟ ವಿಸ್ತರಣೆ

ನವದೆಹಲಿ: ನೋ ಕ್ಯಾಬಿನೆಟ್ ಇಷ್ಯೂ.. ಓನ್ಲಿ ಎಂಎಲ್‍ಸಿ ಎಲೆಕ್ಷನ್ ಅಂತ ಹೇಳುವ ಮೂಲಕ ಸಚಿವ ಸ್ಥಾನದ ಕನಸು ಕಾಣುತ್ತಿದ್ದವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶಾಕ್ ನೀಡಿದ್ದಾರೆ.

ಸಚಿವರಾಗಲು ಬಯಸುವವರು ಇನ್ನು ಒಂದು ತಿಂಗಳು ಕಾಯುವುದು ಅನಿವಾರ್ಯವಾಗಿದೆ ಅಂತ ರಾಹುಲ್ ಗಾಂಧಿ ಹೇಳಿರುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ನಿಗಮ ಮಂಡಳಿ, ಸಂಪುಟ ವಿಸ್ತರಣೆ, ಅಕ್ಟೋಬರ್ 3ರ ನಂತರ ಚರ್ಚೆಗೆ ಬರುವಂತೆ ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿನ ಬಂಡಾಯಗಾರರ ಆಸೆಗೂ ನಿರಾಸೆ ಉಂಟಾಗಿದೆ. ಅಲ್ಲದೇ ಎಂಎಲ್‍ಸಿ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿಗೂ ಬ್ರೇಕ್ ಹಾಕಲಾಗಿದೆ. ನಿಗಮ ಮಂಡಳಿಗೆ ಹೆಸರು ಅಂತಿಮ ಪಡಿಸಿದ್ರೆ ಅಸಮಾಧಾನ ಸಾಧ್ಯತೆಯಿದ್ದು, ಶಾಸಕರು ಅಡ್ಡ ಮತದಾನ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಇತ್ತ ಅಕ್ಟೋಬರ್ 3ರಂದು ನಡೆಯಲಿರುವ ಪರಿಷತ್ ಚುನಾವಣೆಗೆ ಮೈತ್ರಿ ಸೂತ್ರದಂತೆ 6 ಸ್ಥಾನದಲ್ಲಿ ಜೆಡಿಎಸ್‍ಗೆ 2, ಕಾಂಗ್ರೆಸ್‍ಗೆ 4 ಸ್ಥಾನಕ್ಕೆ ಅಸ್ತು ಅನ್ನಲಿದೆ. ಚುನಾಯಿತ ಸ್ಥಾನಕ್ಕೆ ಈಗಾಗಲೇ ಆಕಾಂಕ್ಷಿಗಳ ಪಟ್ಟಿಯನ್ನು ರಾಹುಲ್ ಗಾಂಧಿಯವರು ಪಡೆದುಕೊಂಡಿದ್ದಾರೆ. ಆಕಾಂಕ್ಷಿತರ ಪಟ್ಟಿಯಲ್ಲಿ ನಿವೇದಿತ್ ಆಳ್ವ, ವೇಣುಗೋಪಾಲ್, ಯು.ಬಿ.ವೆಂಕಟೇಶ್, ರಾಮಚಂದ್ರಪ್ಪ, ನಾಗರಾಜ್ ಯಾದವ್ ,ರಾಣಿ ಸತೀಶ್, ಕಮಲಾಕ್ಷಿ ಸೇರಿದಂತೆ 12ಕ್ಕೂ ಹೆಚ್ಚು ಹೆಸರು ಪ್ರಸ್ತಾಪ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *