ಗಮನಿಸಿ: ಇನ್ಮುಂದೆ ಸಿಲಿಕಾನ್ ಸಿಟಿಯ ಈ ಭಾಗಗಳಲ್ಲಿ ಮದ್ಯ ಸಿಗಲ್ಲ!

ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯಭಾಗವಾಗಿರುವ ಎಂ.ಜಿರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ ಲ್ಯಾವಲ್ ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿರುವ ಇನ್ನೂ ಮುಂದೆ ಮದ್ಯ ಸಿಗುದಿಲ್ಲ.

ಕಾರಣ ಸುಪ್ರೀಂಕೋರ್ಟ್ ನೀಡಿದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧ ಅದೇಶ ಇಲ್ಲಿಯೂ ಜಾರಿಯಾಗಲಿದೆ. ಹೀಗಾಗಿ, ಈ ಭಾಗದ ಮದ್ಯ ಪ್ರಿಯರಿಗೂ ಸುಪ್ರಿಂ ಅದೇಶ ಕಂಟಕವಾಗಲಿದೆ.

ಒಂದಾನೂಂದು ಕಾಲದಲ್ಲಿ ಈ ಭಾಗದ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೇರಿಕೊಂಡಿದ್ದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಸುಪ್ರೀಂಕೋರ್ಟ್ ಅದೇಶವನ್ನ ಈ ರಸ್ತೆಗಳಲ್ಲಿರುವ ಪಂಚತಾರ ಬಾರ್ ಮತ್ತು ಪಬ್‍ಗಳ ಮೇಲೆ ಜಾರಿ ಮಾಡಲು ಮುಂದಾಗಿದೆ. ಈ ರಸ್ತೆಗಳಲ್ಲಿ ಓಬೇರಾಯ್, ತಾಜ್, ವಿನ್ಸರ್‍ಮ್ಯಾನರ್, ದಿ ಪಾರ್ಕ್, ಲಾ ಮೇರಿಡಿಯನ್ ಸೇರಿದಂತೆ 102 ಪಂಚತಾರ ಬಾರ್ ಹಾಗೂ ಪಬ್‍ಗಳು ಬರುತ್ತವೆ.

ನಿಯಮದ ಪ್ರಕಾರ ಇದೇ ಮೇ ಅಂತ್ಯದೂಳಗೆ ಇಲ್ಲಿಯ ಬಾರ್‍ಗಳ ಲೈಸನ್ಸ್ ಗಳನ್ನ ಅಬಕಾರಿ ಇಲಾಖೆ ರೀನಿವಲ್ ಮಾಡಬೇಕಾಗಿತ್ತು. ಆದ್ರೆ, ಸುಪ್ರೀಂಕೋರ್ಟ್ ಅದೇಶದ ಹಿನ್ನೆಲೆ ಬಾರ್‍ಗಳಲ್ಲಿ ಮದ್ಯ ಮಾರಾಟ ಮಾಡದಂತೆ ಅದೇಶವನ್ನ ರವಾನಿಸಲು ನಿರ್ಧಾರ ಕೈಗೊಂಡಿದೆ. ಇದಕ್ಕೆಲ್ಲಾ ಬಿಬಿಎಂಪಿಯ ವಿಳಂಬ ನೀತಿಯೆ ಕಾರಣವೆನ್ನಲಾಗುತ್ತಿದೆ.

2015ರಲ್ಲೆ ಲೋಕೊಪಯೋಗಿ ಇಲಾಖೆ ಈ ರಸ್ತೆಯನ್ನ ಡಿ-ನೋಟಿಫೈ ಮಾಡಲು ಬಿಬಿಎಂಪಿಗೆ ಸೂಚನೆ ನೀಡಿತ್ತು, ಅದ್ರೆ ಬಿಬಿಎಂಪಿ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೂ, ಇದೇ ಜೂನ್ 16 ರಂದು ಸಹ ಲೋಕೊಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ, ಲಕ್ಷ್ಮಿ ನಾರಾಯಣ ಡಿ-ನೋಟಿಫೈ ಮಾಡುವಂತೆ ಪತ್ರ ಬರೆದಿದ್ದಾರೆ ಆದರೂ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಇಲ್ಲಿಯ ಬಾರ್‍ಗಳಿಗೆ ಕಂಟಕವಾಗಿ ಪರಿಣಮಿಸಿದೆ.

 

Comments

Leave a Reply

Your email address will not be published. Required fields are marked *