ನಿವೇದಿತಾ ಶಿವರಾಜ್‌ಕುಮಾರ್‌ ನಿರ್ಮಾಣದ ‘ಫ್ಲೈರ್‌ ಫ್ಲೈ’ ಚಿತ್ರಕ್ಕೆ ಕುಂಬಳಕಾಯಿ ಪ್ರಾಪ್ತಿ

ಶಿವಣ್ಣನ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾ ‘ಫ್ಲೈರ್‌ ಫ್ಲೈ’ (Fire Fly Kannada) ಕುಂಬಳಕಾಯಿ ಪ್ರಾಪ್ತಿಯಾಗಿದೆ. ಕುಂಬಳಕಾಯಿ ಇವೆಂಟ್‌ನಲ್ಲಿ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ನಿವೇದಿತಾ ಶಿವರಾಜ್ ಕುಮಾರ್, ನಿರ್ದೇಶಕ ವಂಶಿ, ಸಂಗೀತ ನಿರ್ದೇಶಕ ಚರಣ್ ರಾಜ್, ನಾಯಕಿ ರಚನಾ ಸೇರಿದಂತೆ ಇಡೀ ತಂಡ ಭಾಗಿಯಾಗಿತ್ತು. ಇದನ್ನೂ ಓದಿ:ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ 200 ರೂ.ಗೆ ನಿಗದಿಪಡಿಸುವಂತೆ ಸಿಎಂಗೆ ಮನವಿ

ಈ ಸಿನಿಮಾದಲ್ಲಿ ಯುವ ಪ್ರತಿಭೆ ವಂಶಿ ನಾಯಕನಾಗಿ ನಟಿಸುತ್ತಿದ್ದಾರೆ. ಇದರೊಂದಿಗೆ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ. ‘ಫ್ಲೈರ್‌ ಫ್ಲೈ’ ಸಿನಿಮಾದಲ್ಲಿ ವಂಶಿ ನಟ ಕಮ್ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ವಂಶಿ ಜೊತೆ ಸುಧಾರಾಣಿ, ಅಚ್ಯುತ್ ಕುಮಾರ್, ಶೀತಲ್ ಶೆಟ್ಟಿ ಸೇರಿದಂತೆ ಹಲವು ಹಿರಿಯ ನಟರು ಕೂಡ ಅಭಿನಯಿಸಿದ್ದಾರೆ. ಇನ್ನು ವಂಶಿಗೆ ನಾಯಕಿಯಾಗಿ ರಚನಾ ಇಂದರ್ ಜೊತೆಯಾಗಿದ್ದಾರೆ.

‘ಫೈರ್ ಫ್ಲೈ’ ಸಿನಿಮಾಗೆ ಅಭಿಲಾಷ್ ಕಳತ್ತಿ ಕ್ಯಾಮರಾ ವರ್ಕ್ ಇದ್ದರೆ, ಚರಣ್ ರಾಜ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಘು ನಿಡುವಳ್ಳಿ ಅವರ ಸಂಭಾಷಣೆಯಿದೆ. ಈ ಸಿನಿಮಾವನ್ನು ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡಲು ಮುಂದಾಗಿದೆ.