ಆಧುನಿಕ ಭಾರತದ ಪಿತಾಮಹ ದೇಶಕ್ಕಾಗಿ ಏನ್ ಮಾಡಿದ್ದಾರೆ – ನಿತೀಶ್ ಕುಮಾರ್ ಪ್ರಶ್ನೆ

ಪಾಟ್ನಾ: ಆಧುನಿಕ ಭಾರತದ ಪಿತಾಮಹ (Father of the Nation) ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ (Amruta Fadnavis) ಇತ್ತೀಚೆಗೆ `ಪ್ರಧಾನಿ ನರೇಂದ್ರ ಮೋದಿ ಆಧುನಿಕ ಭಾರತದ ಪಿತಾಮಹ’ ಎಂದು ಬಣ್ಣಿಸಿದ್ದರು. ಮಹಾತ್ಮ ಗಾಂಧಿ ಅವರು ರಾಷ್ಟ್ರಪಿತರೇ, ಮೋದಿ ಜೀ ಅವರು ನವ ಭಾರತದ ಪಿತಾಮಹ. ಇಬ್ಬರೂ ರಾಷ್ಟ್ರಪಿತಾಮಹರೇ ಎಂದು ಗುಣಗಾನ ಮಾಡಿದ್ದರು.

ಅಮೃತಾ ಫಡ್ನವೀಸ್ ಹೇಳಿಕೆ ಉಲ್ಲೇಖಿಸಿ ಮಾತನಾಡಿದ ಅವರು, ನರೇಂದ್ರ ಮೋದಿ (Narendra Modi) ಅವರಿಗೂ ಸ್ವಾತಂತ್ರ‍್ಯ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ, ಆರ್‌ಎಸ್‌ಎಸ್ (RSS) ಸ್ವಾತಂತ್ರ‍್ಯ ಹೋರಾಟಕ್ಕೆ ಕೊಡುಗೆ ನೀಡಿಲ್ಲ. ಆದರೂ ನಾವು ಭಾರತದ ಪಿತಾಮಹ ಅನ್ನೋ ಹೇಳಿಕೆಯನ್ನು ನಾವು ಕೇಳಿದ್ದೇವೆ. ಆಧುನಿಕ ಭಾರತದ ಪಿತಾಮಹ ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮೋದಿ ನವಭಾರತದ ಪಿತಾಮಹ – ಪ್ರಧಾನಿ ಗುಣಗಾನ ಮಾಡಿದ ಮಹಾರಾಷ್ಟ್ರ ಡಿಸಿಎಂ ಪತ್ನಿ

ಮಹಾರಾಷ್ಟ್ರ (Maharashtra) ಕಾಂಗ್ರೆಸ್ (Congress) ಮುಖ್ಯಸ್ಥ ನಾನಾ ಪಟೋಲೆ ಸಹ ಅಮೃತಾ ಫಡ್ನವೀಸ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾತ್ಮ ಗಾಂಧಿ ಅವರನ್ನ ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ ಬಿಜೆಪಿಯ ಆಧುನಿಕ ಭಾರತ ಕೆಲವು ಹಿತೈಷಿಗಳನ್ನು ಶ್ರೀಮಂತರನ್ನಾಗಿ ಮಾಡುವುದು ಹಾಗೂ ದೀನ ದಲಿತರನ್ನ ಹಸಿವಿನಿಂದಲೇ ಉಳಿಯುವಂತೆಯೇ ಮಾಡುತ್ತಿದೆ. ಇಂತಹ ನವಭಾರತ ನಮಗೆ ಬೇಕಿಲ್ಲ ಎಂದಿದ್ದಾರೆ. 

ಕೆಲವು ಶ್ರೀಮಂತ ಉದ್ಯಮಿಗಳಿಗಾಗಿ ಮೋದಿಜಿಯನ್ನು ನವಭಾರತದ ರಾಷ್ಟ್ರಪಿತರನ್ನಾಗಿ ಮಾಡಲು ಅಮೃತಾ ಅವರು ಬಯಸಿದ್ರೆ, ಅವರು ಮಾಡಿಕೊಳ್ಳಲಿ, ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಹೊಸ ವರ್ಷ ಸಂಭ್ರಮ – ನಂದಿಗಿರಿಧಾಮಕ್ಕೆ ಲಗ್ಗೆ ಇಟ್ಟ ಸಾವಿರಾರು ಪ್ರವಾಸಿಗರು

ಕಾಂಗ್ರೆಸ್ ಹಿರಿಯ ನಾಯಕ ಪ್ರಮೋದ್ ತಿವಾರಿ ಸಹ ಕಿಡಿ ಕಾರಿದ್ದು, ಬಿಜೆಪಿಯಲ್ಲಿ ಇಬ್ಬರು ಪಿತಾಮಹರು ಇರಬಹುದು, ಆದ್ರೆ ದೇಶದಲ್ಲಿ ಒಬ್ಬರೇ ರಾಷ್ಟ್ರಪಿತ ಎಂದು ತಿರುಗೇಟು ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *