ಮದ್ಯ ಸೇವಿಸುವವರು ಭಾರತೀಯರಲ್ಲ, ಮಹಾಪಾಪಿಗಳು: ನಿತೀಶ್ ಕುಮಾರ್

ಪಾಟ್ನಾ: ಮಹಾತ್ಮ ಗಾಂಧಿ ಕೂಡ ಮದ್ಯ ಸೇವನೆಯನ್ನು ವಿರೋಧಿಸಿದ್ದರು. ಅವರ ತತ್ವಗಳಿಗೆ ವಿರುದ್ಧವಾಗಿ ನಡೆಯುವವರು ಮಹಾಪಾಪಿಗಳು. ಅಂತವರನ್ನು ಭಾರತೀಯರೆಂದು ಪರಿಗಣಿಸಲಾಗುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಜನರು ಸೇವಿಸುತ್ತಾರೆ. ಹೀಗಾಗಿ ಅದರ ಪರಿಣಾಮಗಳಿಗೆ ಅವರೇ ಹೊಣೆ ಹೊರತು ರಾಜ್ಯ ಸರ್ಕಾರ ಹೊಣೆಯಲ್ಲ. ಮದ್ಯಪಾನ ಸೇವಿಸಿ ಮೃತಪಡುವ ಜನರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ಹೇಳಿದರು.

ಬಿಹಾರ ನಿಷೇಧ ಮತ್ತು ಅಬಕಾರಿ (ತಿದ್ದುಪಡಿ) ಮಸೂದೆ, 2022, ರಾಜ್ಯಪಾಲರ ಅನುಮೋದನೆಯನ್ನು ಪಡೆಯಿತು. ಇದರ ಪ್ರಕಾರ ಅಪರಾಧಿಗಳು ದಂಡವನ್ನು ಠೇವಣಿ ಮಾಡಿದ ನಂತರ ಡ್ಯೂಟಿ ಮ್ಯಾಜಿಸ್ಟ್ರೇಟ್‍ನಿಂದ ಜಾಮೀನು ಪಡೆಯುತ್ತಾರೆ. ಒಂದು ವೇಳೆ ವ್ಯಕ್ತಿಯು ಅದನ್ನು ಪಾವತಿಸಲು ವಿಫಲವಾದರೆ, ಒಂದು ತಿಂಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದನ್ನೂ ಓದಿ: ಬಾಯಿ ಮುಚ್ಚು, ಇದು ನಿನಗೆ ಒಳ್ಳೆಯದಲ್ಲ: ಪತ್ರಕರ್ತ ವಿರುದ್ಧ ರಾಮದೇವ್ ಕಿಡಿ

ಮದ್ಯ ನಿಷೇಧ ಕಾನೂನನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿಲ್ಲ ಮತ್ತು ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದರೆ, ಮದ್ಯ ನಿಷೇಧ ಕೇವಲ ಕಾಗದದಲ್ಲಿ ಮಾತ್ರ ಉಳಿದಿದೆ ಎಂದು ಪ್ರತಿಪಕ್ಷಗಳು ಟೀಕಿಸಿದೆ. ಇದನ್ನೂ ಓದಿ: ಮೋದಿ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಬೆಳಗಾವಿಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

Comments

Leave a Reply

Your email address will not be published. Required fields are marked *