ಪಾಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಬುಧವಾರ ಸಂಜೆ ರಾಜ್ಯಪಾಲರನ್ನು ಭೇಟಿಯಾದ ನಿತೀಶ್ ಕುಮಾರ್ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಸಿಎಂ ನಿತೀಶ್ ಕುಮಾರ್ ತೇಜಸ್ವಿ ಯಾದವ್ ಅವರ ರಾಜೀನಾಮೆಯನ್ನು ಕೇಳಿಲ್ಲ. ತೇಜಸ್ವಿ ಯಾದವ್ ರಾಜೀನಾಮೆಯನ್ನು ನೀಡುವುದೂ ಇಲ್ಲ ಎಂದು ಆರ್‍ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಇಂದು ಹೇಳಿದ್ದರು. ಈ ಹೇಳಿಕೆ ನೀಡಿದ್ದ ಬೆನ್ನಲ್ಲೇ ಸಂಜೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ.
ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ಸಂಬಂಧ ಸಿಬಿಐ ದಾಖಲಿಸಿಕೊಂಡಿರುವ ದೂರಿನಿಂದ ತೇಜಸ್ವಿ ಯಾದವ್ ಆರೋಪ ಮುಕ್ತವಾಗಿ ಹೊರಬರಬೇಕು ಎಂದು ಜೆಡಿಯು ನಾಯಕರು ಹೇಳಿದ್ದರು. ಈ ಸಂಬಂಧ ತೇಜಸ್ವಿ ರಾಜೀನಾಮೆಗೆ ನಿತೀಶ್ ಕುಮಾರ್ ಪಟ್ಟು ಹಿಡಿದಿದ್ದರು. ಆದರೆ ತೇಜಸ್ವಿ ಯಾದವ್ ರಾಜೀನಾಮೆ ನೀಡದೇ ಇದ್ದ ಕಾರಣ ನಿತೀಶ್ ಕುಮಾರ್ ಈಗ ರಾಜೀನಾಮೆ ನೀಡಿದ್ದಾರೆ.
#WATCH Live outside Raj Bhavan: Nitish Kumar resigns as Bihar CM. https://t.co/yqIRX2WAlH
— ANI (@ANI) July 26, 2017

Leave a Reply