ಪವಾರ್‌ ಆಯೋಜಿಸಿದ್ದ ಡಿನ್ನರ್‌ನಲ್ಲಿ ಗಡ್ಕರಿ, ರಾವತ್‌ ಭಾಗಿ

ನವದೆಹಲಿ: ಮಂಗಳವಾರ ರಾತ್ರಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಆಯೋಜಿಸಿದ್ದ ಡಿನ್ನರ್‌ನಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಭಾಗವಹಿಸಿದ್ದಾರೆ.

ದೆಹಲಿಯ 6 ಜನಪಥ್‌ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಮಹಾರಾಷ್ಟ್ರದ ಎಲ್ಲ ರಾಜಕೀಯ ನಾಯಕರಿಗೆ ಪವಾರ್‌ ಔತಣಕೂಟವನ್ನು ಆಯೋಜಿಸಿದ್ದರು.  ಇದನ್ನೂ ಓದಿ: ರಾಜಸ್ಥಾನದಲ್ಲಿ ಮುಸ್ಲಿಂ ಏರಿಯಾಗಳಿಗೆ ದಿನದ 24 ಗಂಟೆ ನಿರಂತರ ವಿದ್ಯುತ್

ಈ ಡಿನ್ನರ್‌ ಪಾರ್ಟಿಗೆ ಗಡ್ಕರಿ, ಶಿವಸೇನೆ ರಾಜ್ಯ ಸಭಾ ಸದಸ್ಯ ಸಂಜಯ್‌ ರಾವತ್‌, ಬಿಜೆಪಿಯ ಸಂಸದ ನಿಶಿಕಾಂತ್ ದುಬೆ ಸೇರಿ ಹಲವು ಎನ್‌ಸಿಪಿ, ಶಿವಸೇನೆಯ ಸಂಸದರು ಭಾಗಿಯಾಗಿದ್ದರು.

ಜಾರಿ ನಿರ್ದೇಶನಾಲಯ ಮಂಗಳವಾರ ಮುಂಬೈನಲ್ಲಿ ನಡೆದಿದೆ ಎನ್ನಲಾದ 1,034 ಕೋಟಿ ರೂ. ಮೌಲ್ಯ ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಸಂಜಯ್‌ ರಾವತ್‌ ಪತ್ನಿ ಮತ್ತು ಆಪ್ತರಿಗೆ ಸೇರಿದ 11 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿತ್ತು.  ಇದನ್ನೂ ಓದಿ: ಕಪ್ಪು ಹಣ ಸಿಕ್ಕರೆ, ನನ್ನ ಸಂಪೂರ್ಣ ಆಸ್ತಿಯನ್ನು ಬಿಜೆಪಿಗೆ ದಾನ ಮಾಡುತ್ತೇನೆ : ಸಂಜಯ್ ರಾವತ್

ಮಹಾರಾಷ್ಟ್ರದ ಶಾಸಕರು ಲೋಕಸಭೆಯ ಸಚಿವಾಲಯ ಆಯೋಜಿಸಿದ ಎರಡು ದಿನದ ಕಾರ್ಯಕ್ರಮಕ್ಕೆ ದೆಹಲಿಗೆ ಆಗಮಿಸಿದ್ದಾರೆ. ಈ ಶಾಸಕರು ಡಿನ್ನರ್‌ನಲ್ಲಿ ಪಾಲ್ಗೊಂಡಿದ್ದರು.

Comments

Leave a Reply

Your email address will not be published. Required fields are marked *