ವಾಸು ನಾನ್ ಪಕ್ಕಾ ಕಮರ್ಶಿಯಲ್ ಚಿತ್ರದ ಮೂಲಕ ನಾಯಕಿಯಾಗಿ ಅವತರಿಸಿರುವವರು ನಿಶ್ವಿಕಾ ನಾಯ್ಡು. ಈ ಚಿತ್ರದ ಯಶಸ್ಸಿನ ನಂತರದಲ್ಲಿ ಮತ್ತೊಂದಷ್ಟು ಹೊಸ ಅವಕಾಶಗಳು ನಿಶ್ವಿತಾರನ್ನು ಅರಸಿ ಬರಲಾರಂಭಿಸಿವೆ. ಅವರೀಗ ಪ್ರಜ್ವಲ್ ದೇವರಾಜ್ ನಟಿಸಲಿರೋ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆಂಬ ಸುದ್ದಿ ಹರಿದಾಡಿಸಲಾರಂಭಿಸಿದೆ.
ಇದು ಗುರು ದೇಶಪಾಂಡೆ ನಿರ್ದೇಶನ ಮಾಡಲಿರೋ ಚಿತ್ರ. ಈಗಾಗಲೇ ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿದ್ದಾರೆ. ಅವರನ್ನೇ ತಮ್ಮ ಮುಂದಿನ ಚಿತ್ರದಲ್ಲಿಯೂ ನಾಯಕಿಯನ್ನಾಗಿ ಗುರುದೇಶಪಾಂಡೆ ಆಯ್ಕೆ ಮಾಡಿದ್ದಾರಂತೆ.
ಗುರುದೇಶಪಾಂಡೆ ನಿರ್ದೇಶನದ ಪ್ರಜ್ವಲ್ ನಾಯಕನಾಗಿರೋ ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಆದರೆ ಎಲ್ಲ ತಯಾರಿಯೂ ನಡೆಯುತ್ತಿದೆ. ಈ ಚಿತ್ರದಲ್ಲಿ ನಿಶ್ವಿಕಾ ನಾಯಕಿಯಾಗಿ ಭಿನ್ನ ಪಾತ್ರವೊಂದರಲ್ಲಿ ನಟಿಸಲಿದ್ದಾರಂತೆ. ಹೀಗೆ ನಿಶ್ವಿತಾರನ್ನು ತಮ್ಮ ಮತ್ತೊಂದು ಚಿತ್ರಕ್ಕೂ ಗುರು ಆರಿಸಿಕೊಳ್ಳಲು ಕಾರಣ ಆಕೆಯ ಪ್ರತಿಭೆ. ಪಡ್ಡೆಹುಲಿ ಚಿತ್ರದಲ್ಲಿ ಚೆಂದಗೆ ನಟಿಸಿರುವ ನಿಶ್ವಿಕಾ ತಾವೇ ಡಬ್ ಮಾಡಿದ್ದಾರಂತೆ. ಉತ್ಸಾಹದ ಚಿಲುಮೆಯಂಥಾ, ಕಲಿಕೆಯ ಆಸಕ್ತಿ ಇರುವ ನಿಶ್ವಿಕಾ ಈ ಮೂಲಕ ಬಂಪರ್ ಅವಕಾಶವೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply