ಏನೇ ವಿವಾದ ಇದ್ರೂ ಇಂಡಸ್ಟ್ರಿಯೊಳಗೆ ಬಗೆಹರಿಸಿಕೊಳ್ಳಬೇಕು, ಮರ್ಯಾದೆ ತೆಗೆಯಬಾರ್ದು: ನಿಖಿಲ್

– ಭಗವಂತ ಸುದೀಪ್ ಅವರಿಗೆ ಶಕ್ತಿ ಕೊಟ್ಟಿದ್ದಾನೆ

ಬೆಂಗಳೂರು: ಯಾವುದೇ ವಿವಾದ ಇದ್ದರೂ ಒಳಗಡೆ ಕುಳಿತು ಬಗೆಹರಿಸಿಕೊಳ್ಳಬೇಕು. ಏನೇ ಆದರೂ ಕನ್ನಡ ಇಂಡಸ್ಟ್ರಿಯ ಮರ್ಯಾದೆ ಹೋಗಬಾರದು ಎಂದು ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾದ ಬಿಡುಗಡೆ ಅಡ್ಡಿ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಸಿನಿಮಾ ರಿಲೀಸ್ ಆದರೂ ಅದು ನಮಗೆ ಹೆಮ್ಮೆ ಇದೆ. ಬೇರೆ ಭಾಷೆಗಳ ಚಿತ್ರಕ್ಕಿಂತ ನಮ್ಮ ಭಾಷೆಯಲ್ಲಿ ತುಂಬ ಕಷ್ಟಪಡುತ್ತಿದ್ದೇವೆ. ಹೊರಗಡೆ ನಾವು ನಗೆಪಾಟಲಿಗೆ ಈಡಾಗದಂತೆ ನಡೆದುಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ: ಸುದೀಪ್

ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಅಡ್ಡಿ ಉಂಟಾಗಿದ ವಿಚಾರ ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ಯಾವುದೇ ವಿವಾದ ಇದ್ದರೂ ಒಳಗಡೆ ಕುಳಿತು ಬಗೆಹರಿಸಿಕೊಳ್ಳಬೇಕು. ಏನೇ ಆದರೂ ಕನ್ನಡ ಇಂಡಸ್ಟ್ರಿಯ ಮರ್ಯಾದೆ ಹೋಗಬಾರದು. ಇದು ಆಗಬಾರದಿತ್ತು, ಆದರೆ ಆಗಿದೆ. ನಾನು ಸುದೀಪ್ ಅವರ ಜೊತೆ ಆತ್ಮೀಯವಾಗಿದ್ದೇನೆ. ಭಗವಂತ ಸುದೀಪ್ ಅವರಿಗೆ ಶಕ್ತಿ ಕೊಟ್ಟಿದ್ದಾನೆ. ಹಾಗಾಗಿ ಬಗೆಹರಿದಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು ಯಾವುದೇ ಹೀರೋ ಸಿನಿಮಾ ರಿಲೀಸ್ ಆದರೂ ನಮಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ

Comments

Leave a Reply

Your email address will not be published. Required fields are marked *