-ಮನೆ ಕಟ್ಟೋವರೆಗೂ ಮಂಡ್ಯದಲ್ಲಿ ಶೆಡ್ ಹಾಕಿ ಇರ್ತೀನಿ
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಸೋತರು ಧೃತಿಗೆಡದ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಬಿಡುವುದಿಲ್ಲೆಂದು ಕಾರ್ಯಕರ್ತರು ಮತ್ತು ಮುಖಂಡರಿಗೆ ಭರವಸೆ ನೀಡಿದ್ದಾರೆ.
ಜಿಲ್ಲೆಯ ಮುಖಂಡರೊಂದಿಗೆ ಸೋಲಿನ ಬಳಿಕ ಚರ್ಚೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಂಡ್ಯದ ಜನರು ನನ್ನನ್ನು ಸೋಲಿಸಿರಬಹುದು. ಆದರೆ ಮಂಡ್ಯದಲ್ಲಿ ತೋಟ ಮಾಡಿ ಮನೆ ಕಟ್ಟೋವರೆಗೂ ಅಲ್ಲೆ ಶೆಡ್ ಹಾಕಿ ವಾಸಕ್ಕೂ ನಾನು ಸಿದ್ಧವಾಗಿದ್ದೇನೆ ಎಂದು ನಿಖಿಲ್ ಹೇಳಿದ್ದಾರೆ. ಚುನಾವಣೆ ಸೋತರು ನಿಖಿಲ್ ಉತ್ಸಾಹ ಕಂಡು ಜೆಡಿಎಸ್ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಇಂದು ಆಗಿರುವ ಬದಲಾಣೆಗೆ ನಾವು ಗ್ರೌಂಡ್‍ನಲ್ಲಿ ಇಳಿದು ಜನರನ್ನು ಭೇಟಿಯಾದಗಲೇ ವಾಸ್ತವ ಅಂಶ ಅರ್ಥವಾಗಿದೆ. ಎಂಟು ತಾಲೂಕಗಳನ್ನು 45 ದಿನಗಳ ಕಾಲ ಸುತ್ತಿದ್ದೇನೆ. ಅಲ್ಲಿನ ಜನರ ಬಗ್ಗೆ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಬೇರೆ ಜಿಲ್ಲೆಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ.
ನಾನು ತಕ್ಷಣವೇ ಮಂಡ್ಯದಲ್ಲಿ ಒಂದು ತೋಟ ಮಾಡಿ ಮನೆ ಕಟ್ಟುತ್ತೇನೆ. ಮನೆ ಕಟ್ಟೋವರೆಗೂ ಕಾಯುತ್ತಾ ಕುಳಿತುಕೊಳ್ಳಲ್ಲ. ಶೆಡ್ ಹಾಕಿಕೊಂಡು ವಾಸ ಮಾಡುತ್ತೇನೆ. ನಾನು ಹಿಂದೆ ಇದ್ದಿದ್ದಕ್ಕೂ, ಈಗ ಇರೋದಕ್ಕೂ ವ್ಯತ್ಯಾಸವಿದೆ. ಇಂದು ಮಂಡ್ಯದಲ್ಲಿ ಸೋಲು ಕಂಡಿದ್ದೇನೆ. ಎಲ್ಲೋ ಒಂದು ಕಡೆ ಜನರಿಗೆ ಬೇಸರವಾಗಿದೆ ಎಂದು ನಿಖಿಲ್ ಹೇಳಿದ್ದಾರೆ.
https://www.youtube.com/watch?v=gZY5O8EQcp0

Leave a Reply