‘Just I Am Happy’- ನಾಚಿಕೊಂಡ ನಿಖಿಲ್ ಭಾವಿ ಪತ್ನಿ

ಬೆಂಗಳೂರು: ಜಸ್ಟ್ ಐ ಆ್ಯಮ್ ಹ್ಯಾಪಿ ಎಂದು ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಭಾವಿ ಪತ್ನಿ ರೇವತಿ ನಾಚಿಕೊಂಡು ಹೇಳಿದ್ದಾರೆ.

ನಿಶ್ಚಿತಾರ್ಥವಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರೇವತಿ, ನನಗೆ ತುಂಬಾ ಖುಷಿಯಾಗಿದೆ ಅಷ್ಟೆ ಎಂದು ನಾಚಿಕೊಂಡು ಹೇಳಿದ್ದಾರೆ. ಇದೇ ವೇಳೆ ಭಾವಿ ಪತ್ನಿಗೆ ಕೇಳಿದ ಪ್ರಶ್ನೆಗಳಿಗೆ ನಿಖಿಲ್ ಕುಮಾರಸ್ವಾಮಿ ಉತ್ತರಿಸಿದ್ದಾರೆ.

ಒಬ್ಬ ಒಳ್ಳೆಯ ವ್ಯಕ್ತಿಯಾಗಿ ನನ್ನನ್ನು ಇಷ್ಟಪಡುತ್ತಾರೆ. ರಾಜಕಾರಣ, ಸಿನಿಮಾ ಇದೆಲ್ಲಾ ಮುಖ್ಯವಲ್ಲ. ನೀವು ಕೇಳುವ ಪ್ರಶ್ನೆಯಿಂದ ತುಂಬಾ ಮುಜುಗರ ಪಡುತ್ತಿದ್ದಾರೆ ಎಂದರು. ನಂತರ ಹೋಗೋಣ ಬನ್ನಿ ಎಂದು ಹೇಳುತ್ತಿದ್ದಾರೆ ನೋಡಿ ನೀವು ಎಷ್ಟು ತೊಂದರೆ ಕೊಡುತ್ತಿದ್ದೀರ ಎಂದು ತಮಾಷೆಗೆ ನಿಖಿಲ್ ಹೇಳಿದರು.

ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ ನಿಖಿಲ್ ಹಾಗೂ ರೇವತಿ ಅವರ ನಿಶ್ಚಿತಾರ್ಥ ಒಕ್ಕಲಿಗ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆಯಿತು. ಈ ನಿಶ್ಚಿತಾರ್ಥ ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಅವರ ಸಹೋದರಿಯರಾದ ಶೈಲಜಾ ಮತ್ತು ಅನಸೂಯ ಹಾಗೂ ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ ಅವರ ಮಾರ್ಗದರ್ಶನದಲ್ಲಿ ಎಲ್ಲಾ ತಯಾರಿಗಳು ಆಗಿದ್ದವು. ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಕೋರಿದ್ದಾರೆ.

ನಿಶ್ಚಿತಾರ್ಥ ಸಂಪೂರ್ಣ ವೈಟ್ ಥೀಮ್‍ನಲ್ಲಿದ್ದು, ಕಾರ್ಪೆಟ್‍ಯಿಂದ ಹಿಡಿದು ನಿಖಿಲ್-ರೇವತಿ ಉಂಗುರ ಬದಲಾಯಿಸುವ ಮಂಟಪ ಕೂಡ ಶ್ವೇತ ವರ್ಣದಲ್ಲಿತ್ತು. ನಿಶ್ಚಿತಾರ್ಥದ ಮಂಟಪ ಹೂವಿನಿಂದ ಅಲಂಕರಿಸಲಾಗಿದ್ದು, ಅದಕ್ಕಾಗಿ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಬೆಳೆಯುವ ಬಿಳಿ ಬಣ್ಣದ ಹೂವನ್ನು ತರಿಸಲಾಗಿತ್ತು. ದೆಹಲಿಯಿಂದ ಕ್ರಿಸ್ಟಲ್ಸ್ ಗಳನ್ನು ತರಿಸಿ ಅಲಂಕಾರಕ್ಕೆ ಬಳಸಿಕೊಳ್ಳಲಾಗಿತ್ತು. ಸೀಲಿಂಗ್ ಸಹ ಹೂವಿನಿಂದಲೇ ಅಲಂಕಾರ ಮಾಡಲಾಗಿತ್ತು.

Comments

Leave a Reply

Your email address will not be published. Required fields are marked *