ಮಂಡ್ಯ ಜನತೆ ತುಂಬಾ ಪ್ರಜ್ಞಾವಂತರು, ಬುದ್ಧಿವಂತರು: ನಿಖಿಲ್

ಮಂಡ್ಯ: ಲೋಕಸಭಾ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿದ್ದು, ಇವತ್ತು ಕೆಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಸುಮಲತಾ ಅಂಬರೀಶ್ ಮಾಡಿರುವ ಎಲ್ಲಾ ಆರೋಪಗಳಿಗೂ ನಿಖಿಲ್ ತಿರುಗೇಟು ನೀಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿಖಿಲ್, ಪ್ರಚಾರದ ವೇಳೆ ಮತದಾರ ಪ್ರಭುಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮಂಡ್ಯ ಜನತೆ ಪ್ರತಿಯೊಂದು ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮಂಡ್ಯ ಜನತೆ ತುಂಬಾ ಪ್ರಜ್ಞಾವಂತರು, ಬುದ್ಧಿವಂತರು, ಹೀಗಾಗಿ ನಾನು ಏನು ಹೇಳುವುದಿಲ್ಲ, ಅವರಿಗೆ ಅರ್ಥವಾಗುತ್ತದೆ. ಐಟಿ ದಾಳಿಯ ಬಗ್ಗೆ ಏ.18ರಂದು ಮತದಾರ ಉತ್ತರ ನೀಡುತ್ತಾರೆ ಎಂದರು.

ನಾವು ಏನು ಅಂಬರೀಶ್ ಹೆಸರನ್ನ ಪ್ರಚಾರದ ವೇಳೆ ಬಳಸಿಲ್ಲ. ಅಂಬರೀಶ್ ಅಣ್ಣನ ಬಗ್ಗೆ ನಮಗೆ ಗೌರವವಿದೆ. ಅವರು ಏನೇ ಆರೋಪ ಮಾಡಬಹುದು. ಅವರ ಹೆಸರನ್ನು ನಾವು ದುರುಪಯೋಗ ಮಾಡಿಕೊಳ್ಳುತ್ತಿಲ್ಲ. ಅವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಆದರೆ ಯಾವುದಕ್ಕೂ ಸಾಕ್ಷಿ ಇಲ್ಲ. ಯಾರನ್ನೂ ದೂಷಿಸುವ ಮಟ್ಟಕ್ಕೆ ಹೋಗುವುದಿಲ್ಲ ಎಂದು ಸುಮಲತಾ ಅವರಿಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ಕೊಟ್ಟರು.

Comments

Leave a Reply

Your email address will not be published. Required fields are marked *