ಯುವಕ, ಯುವತಿ ಹೆಸ್ರಲ್ಲಿ ನಕಲಿ ಫೇಸ್‍ ಬುಕ್ ಅಕೌಂಟ್ ಕ್ರಿಯೇಟ್: ನೈಜೀರಿಯಾ ಪ್ರಜೆಯ ಬಂಧನ

ಬೆಂಗಳೂರು: ಫೇಸ್ ಬುಕ್ ನಲ್ಲಿ ನಕಲಿ ಅಕೌಂಟ್ ಓಪನ್ ಮಾಡಿ ವಂಚನೆ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಕ್ರಿಶ್ಚಿಯನ್ ಉಲುಮಿಸಿ( 39) ಬಂಧಿತ ಆರೋಪಿ. 2013 ರಲ್ಲಿ ನೈಜೀರಿಯಾದಿಂದ ಬಿಜಿನೆಸ್ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಆರೋಪಿ ಬೇರೆ ಬೇರೆ ಹೆಸರುಗಳಲ್ಲಿ ಯುವಕ ಮತ್ತು ಯುವತಿಯರ ಹೆಸರಿನಲ್ಲೂ ನಕಲಿ ಅಕೌಂಟ್ ಓಪನ್ ಮಾಡಿ ಚಾಟ್ ಮಾಡುತ್ತಿದ್ದನು.

ಆರೋಪಿ ಯುವಕರಿಗೆ ತಾನು ವಿಧವೆ ಹಾಗೂ ಯುವತಿಯರಿಗೆ ವಿಧುರ ಎಂದು ನಂಬಿಸುತ್ತಿದ್ದನು. ನಾನೊಬ್ಬ ಬ್ರಿಟೀಷ್ ನೇವಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಿಮಗೆ ಪ್ರೀತಿಯಿಂದ ಉಡುಗೊರೆ ಕೊಡುವುದಾಗಿ ನಂಬಿಸಿ ಆಮೇಲೆ ಕಸ್ಟಂ ನಲ್ಲಿ ಗಿಫ್ಟ್ ಸಿಕ್ಕಿಹಾಕಿಕೊಂಡಿದೆ ಅದಕ್ಕೆ ಹಣ ಪಾವತಿಸಬೇಕೆಂದು 25 ಸಾವಿರದಿಂದ ಎರಡು ಲಕ್ಷದವರೆಗೂ ಹಣವನ್ನ ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದನು.

ಹಣ ಪಾವತಿಯಾದ ನಂತರ ಫೇಸ್ ಬುಕ್ ಅಕೌಂಟನ್ನು ಡಿಲೀಟ್ ಮಾಡುತ್ತಿದ್ದನು. ಸದ್ಯ ಬಂಧಿತ ಆರೋಪಿ ಕ್ರಿಶ್ವಿಯನ್ ಉಲುಮಿಸಿಯಿಂದ 2 ಲ್ಯಾಪ್‍ಟಾಪ್, 3 ಮೊಬೈಲ್, 4 ಸಿಮ್ ಕಾರ್ಡ್, 2 ಪಾಸ್ಪೊರ್ಟ್, 4 ಡಾಂಗಲ್ ಗಳನ್ನು ಸೈಬರ್ ಕ್ರೈಂ ಪೊಲೀಸರ ವಶಕ್ಕೆ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *