ನೈಸ್ ಕಂಪೆನಿ ಮುಖ್ಯಸ್ಥ ಅಶೋಕ್ ಖೇಣಿಯಿಂದ ಬೃಹತ್ ವಂಚನೆ

ಬೆಂಗಳೂರು: ನೈಸ್ ಅಕ್ರಮದ ತನಿಖೆಗೆ ರಚನೆಯಾಗಿದ್ದ ಸದನ ಸಮಿತಿ ವರದಿ ಈಗ ಬಹಿರಂಗವಾಗಿದೆ. ಸದನ ಸಮಿತಿ ವರದಿಯಲ್ಲಿ ನೈಸ್ ಕಂಪೆನಿಯ ವಂಚನೆ ಬಹಿರಂಗವಾಗಿದ್ದು, ಪಬ್ಲಿಕ್ ಟಿವಿಗೆ ನೈಸ್ ವಂಚನೆಯ ಇಂಚಿಂಚು ಮಾಹಿತಿ ಲಭ್ಯವಾಗಿದೆ.

ನೈಸ್ ಕಂಪೆನಿ ಮುಖ್ಯಸ್ಥ ಅಶೋಕ್ ಖೇಣಿಯಿಂದ ಬೃಹತ್ ವಂಚನೆಯಾಗಿರುವುದು ಬೆಳಕಿಗೆ ಬಂದಿದ್ದು, ನಿಮ್ಮ ಮನೆ ಬಾಗಿಲಿಗೆ ನೈಸ್ ರೋಡ್ ಮಾಡುತ್ತೀನಿ ಅಂತ ರೈತರಿಗೆ ಪಂಗನಾಮ ಹಾಕಿದ್ದಾರೆ. ರೈತರ ಸಾಲಮನ್ನಾದ ಅರ್ಧ ಹಣದಷ್ಟು ಖೇಣಿ ಕಂಪೆನಿಗೆ ಲಾಭವಾಗಿದೆ.

ಅಶೋಕ್ ಖೇಣಿಗೆ ಬರೋಬ್ಬರಿ 7 ಲಕ್ಷದ 077 ಸಾವಿರದ 766 ಕೋಟಿ ಲಾಭವಾಗಿದೆ. ನೈಸ್ ರೋಡ್‍ಗೆ ವಶಪಡಿಸಿಕೊಂಡ ಜಮೀನು ಮಾರಾಟ ಮಾಡಿ ಲಾಭ ಮಾಡಿಕೊಳ್ಳಲಾಗಿದೆ. ರೈತರಿಗೆ ಎಕರೆಗೆ ಕೇವಲ 8 ಲಕ್ಷ ಪುಡಿಗಾಸು ಕೊಟ್ಟಿದ್ದು, ಚದರ ಅಡಿಗೆ ಬರೋಬ್ಬರಿ 5 ಸಾವಿರ, ಪ್ರತಿ ಎಕರೆಗೆ 21 ಕೋಟಿ ರೂ. ಲಾಭ ಮಾಡಿಕೊಂಡಿದ್ದಾರೆ.

ಈ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಿದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ ನಯಾಪೈಸೆ ಬಂಡವಾಳವಿಲ್ಲದೇ ಅಶೋಕ್ ಖೇಣಿ ನೈಸ್ ರೋಡ್ ಮಾಡಿದ್ದಾರೆ. ಲಾಭದ ಹಣದಲ್ಲಿ ಅಮೆರಿಕಾದಲ್ಲಿ ಅಶೋಕ್ ಖೇಣಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ನೈಸ್ ವಂಚನೆ ವರದಿ ರಾಜ್ಯ ಸರ್ಕಾರದ ಕೈ ಸೇರಿ ತಿಂಗಳುಗಳೇ ಕಳೆದರೂ ಇನ್ನೂ ಕ್ರಮ ಕೈಗೊಂಡಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *