ಕೆಫೆ ಬ್ಲಾಸ್ಟ್ ಪ್ರಕರಣ – ಶಂಕಿತ ಉಗ್ರನ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರನ (Suspected Terrorist) ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ (Reward) ಘೋಷಣೆ ಮಾಡಲಾಗಿದೆ.

ಎನ್‌ಐಎಯಿಂದ (NIA) 10 ಲಕ್ಷ ಬಹುಮಾನ ಘೋಷಣೆ ಮಾಡಿದ್ದು, ಶಂಕಿತನ ಸುಳಿವು ನೀಡಿದವರ ಹೆಸರು ಗೌಪ್ಯವಾಗಿ ಇಡುವುದಾಗಿ ಎನ್‌ಐಎ ತಿಳಿಸಿದೆ. ಶಂಕಿತ ಉಗ್ರನ ಸುಳಿವು ಸಿಕ್ಕಲ್ಲಿ 08029510900, 8904241100 ನಂಬರಿಗೆ ಕರೆ ಮಾಡುವಂತೆ ಸೂಚನೆ ನೀಡಲಾಗಿದೆ. ಎನ್‌ಐಎ ಟ್ವಿಟ್ಟರ್‌ನಲ್ಲಿ (Twitter) ಶಂಕಿತ ಬಾಂಬರ್‌ನ ಫೋಟೋ ರಿವೀಲ್ ಮಾಡಿದ್ದು, ರಾಮೇಶ್ವರಂ ಬಾಂಬ್ ಬ್ಲಾಸ್ಟ್ ರುವಾರಿಯ ಸುಳಿವು ನೀಡಿದವರಿಗೆ 10 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಇದನ್ನೂ ಓದಿ: ಅತ್ತೆ ಬೇಗ ಸಾಯಬೇಕು- 50 ರೂ. ನೋಟ್ ಮೇಲೆ ಹರಕೆ ಬರೆದ ಸೊಸೆ!

ಮುಖಕ್ಕೆ ಮಾಸ್ಕ್ ಇಲ್ಲದೇ ಇರುವ ಹತ್ತಿರದ ಫೋಟೋವೊಂದನ್ನು ಎನ್‌ಐಎ ರಿಲೀಸ್ ಮಾಡಿದೆ. ಎನ್‌ಐಎ ಇಂದ ಆರೋಪಿಗಾಗಿ ತೀವ್ರ ತಲಾಷ್ ನಡೆಯುತ್ತಿದೆ. ಇದುವರೆಗೂ ಆರೋಪಿ ಹೋಲುವ ಫೋಟೋ ಇರಲಿಲ್ಲ. ಎನ್‌ಐಎ ಬಿಡುಗಡೆ ಮಾಡಿರುವ ಫೋಟೋದಲ್ಲಿ ಅಲ್ಪ ಸ್ವಲ್ಪ ಮುಖ ಚಹರೆ ಪತ್ತೆಯಾಗಿದೆ. ಇದನ್ನೂ ಓದಿ: ಅಮೇಥಿಯಿಂದ ರಾಹುಲ್‌ ಗಾಂಧಿ, ರಾಯ್‌ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?