ಬ್ರೆಜಿಲ್‌ಗೆ ಆಘಾತ – ಮುಂದಿನ ಪಂದ್ಯಗಳಲ್ಲಿ ಆಡಲ್ಲ ನೇಮರ್

ಕತಾರ್: ಬ್ರೆಜಿಲ್‌ (Brazil) ಫುಟ್‍ಬಾಲ್ ತಂಡದ ನಾಯಕ ನೇಮರ್ (Neymar) ಗಾಯದಿಂದಾಗಿ ಫಿಫಾ ವಿಶ್ವಕಪ್‍ನ ಮುಂದಿನ ಗ್ರೂಪ್‌ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ನಿನ್ನೆ ಸರ್ಬಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ನೇಮರ್ ತಮ್ಮ ಮೊದಲ ಪಂದ್ಯದಲ್ಲೇ ಗಾಯಾಳುವಾಗಿ ಹೊರ ನಡೆಯಬೇಕಾಯಿತು. ಸರ್ಬಿಯಾ ವಿರುದ್ಧ ಉತ್ತಮವಾಗಿಯೇ ಆಡುತ್ತಿದ್ದ ನೇಮರ್‌ಗೆ 80ನೇ ನಿಮಿಷದ ವೇಳೆ ಪಾದದ ನೋವು (Ankle Injury) ಕಾಣಿಸಿಕೊಂಡಿತು. ಬಳಿಕ ಪಂದ್ಯದಿಂದ ಹೊರ ನಡೆದರು. ಇದನ್ನೂ ಓದಿ: ಅರ್ಜೆಂಟೀನಾ ವಿರುದ್ಧ ಗೆಲುವು – ಸೌದಿ ಅರೇಬಿಯಾ ಆಟಗಾರರಿಗೆ ರೋಲ್ಸ್ ರಾಯ್ಸ್ ಗಿಫ್ಟ್ ಘೋಷಿಸಿದ ಸರ್ಕಾರ

ಪಂದ್ಯದ ಕೊನೆಯ 10 ನಿಮಿಷ ಬಾಕಿ ಇರುವಂತೆ ನೇಮರ್ ಮೈದಾನದಿಂದ ಹೊರ ನಡೆದರೂ, ಬ್ರೆಜಿಲ್‌ 2-0 ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿತು. ಈ ಉತ್ಸಾಹದಲ್ಲಿದ್ದ ಬ್ರೆಜಿಲ್‌ಗೆ ಇದೀಗ ನೇಮರ್ ಗ್ರೂಪ್ ಹಂತದ ಪಂದ್ಯದಿಂದ ಹೊರನಡೆದಿರುವ ಆಘಾತಕಾರಿ ಸುದ್ದಿ ಬರಸಿಡಿಲಿನಂತೆ ಬಡಿದಿದೆ.

ನೇಮರ್ ಪಂದ್ಯದ ಬಳಿಕ ತಂಡದ ಹೋಟೆಲ್‍ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದು, ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಹಾಗಾಗಿ ಗ್ರೂಪ್ ಹಂತದ ಮುಂದಿನ 2 ಪಂದ್ಯಗಳಿಂದ ನೇಮರ್ ಹೊರಗುಳಿಯಲಿದ್ದು, ನ. 28 ರಂದು ಸ್ವಿಜರ್ಲ್ಯಾಂಡ್ ವಿರುದ್ಧ ಮತ್ತು ಡಿ.3 ರಂದು ಕ್ಯಾಮರೂನ್ ವಿರುದ್ಧದ ಪಂದ್ಯದಿಂದ ಹೊರನಡೆದಿದ್ದಾರೆ. ಬಳಿಕ ನಡೆಯಲಿರುವ ನಾಕೌಟ್ ಪಂದ್ಯಗಳಿಗೆ ಫಿಟ್ ಆಗಿ ಮರಳುವ ಸಾಧ್ಯತೆ ಇದೆ. ಇದನ್ನೂ ಓದಿ: ಲ್ಯಾಥಮ್‌ ಭರ್ಜರಿ ಶತಕ – ಕೀವಿಸ್‌ ಗೆ 7 ವಿಕೆಟ್‌ಗಳ ಜಯ

ನೇಮರ್ ಬ್ರೆಜಿಲ್‌ನ ಸ್ಟಾರ್ ಆಟಗಾರನಾಗಿದ್ದು, ಈ ಹಿಂದೆ 2013 ಕಾನ್ಫೆಡರೇಶನ್ ಕಪ್ ಮತ್ತು 2016 ರಿಯೊ ಡಿ ಜನೈರೊ ಗೇಮ್ಸ್‌ನಲ್ಲಿ ಬ್ರೆಜಿಲ್‌ ಚಿನ್ನದ ಪದಕ ಗೆಲ್ಲುವಲ್ಲಿ ನೇಮರ್ ಮಹತ್ವದ ಪಾತ್ರವಹಿಸಿದ್ದರು. ಬ್ರೆಜಿಲ್‌ ತಂಡದ ನಾಯಕನಾಗಿರುವ ನೇಮರ್ ಮೇಲೆ ತಂಡ ಅವಲಂಬಿತವಾಗಿದ್ದು, ಅವರ ಹೊರಗುಳಿಯುವುದರಿಂದ ತಂಡಕ್ಕೆ ಹಿನ್ನಡೆ ಉಂಟಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *