– ವೈರಲ್ ಆಯ್ತು ಫೋಟೋಶೂಟ್
ನ್ಯೂಯಾರ್ಕ್: ಇತ್ತೀಚೆಗೆ ಭಾರತ ಮೂಲದ ಯುವಕರಿಬ್ಬರು ವಿದೇಶದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಆಗಿರುವ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು. ಇದೀಗ ಭಾರತ ಮತ್ತು ಪಾಕಿಸ್ತಾನ ಚೆಲುವೆಯರಿಬ್ಬರ ರೊಮ್ಯಾಂಟಿಕ್ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.
ಪಾಕಿಸ್ತಾನ ಮೂಲದ ಸುಂದಾಸ್ ಮಲಿಕ್ ಮತ್ತು ಭಾರತ ಮೂಲದ ಅಂಜಲಿ ಚಕ್ರಾ ಇಬ್ಬರು ಯುವತಿಯರಿಬ್ಬರ ಫೋಟೋಗಳನ್ನು ಫೋಟೋಗ್ರಾಫರ್ ಸರೋವರ್ ಎಂಬವರು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ಇದು ನ್ಯೂಯಾರ್ಕ್ ಲವ್ ಸ್ಟೋರಿ ಎಂದು ಬರೆದುಕೊಂಡಿದ್ದಾರೆ.
A New York Love Story pic.twitter.com/nve9ToKg9y
— Sarowar Ahmed (@therealsarowar) July 28, 2019
ಸುಂದಾಸ್ ಮತ್ತು ಅಂಜಲಿ ಛತ್ರಿಯ ಕೆಳಗೆ ನಿಂತು ಪೋಸ್ ಕೊಟ್ಟಿದ್ದು, ಒಂದು ಫೋಟೋದಲ್ಲಿ ಇಬ್ಬರು ತುಟಿಗೆ ತುಟಿ ಸೇರಿಸಿದ್ದಾರೆ. ಜುಲೈ 29ರಂದು ಸರೋವರ್ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದು, 40 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. 6 ಸಾವಿರಕ್ಕೂ ಹೆಚ್ಚು ರಿಟ್ವೀಟ್‍ಗೊಂಡಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತದ ಯುವಕರ ಮದುವೆ: ಫೋಟೋ ವೈರಲ್
ಅಂಜಲಿ ಸಹ ಇಂದು ತಮ್ಮ ಟ್ವಿಟ್ಟರ್ ನಲ್ಲಿ ಕೆಲ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡು ನನ್ನನ್ನು ಪ್ರೀತಿಸಿದ ಮತ್ತು ಪ್ರೀತಿಸೋದನ್ನು ಕಲಿಸಿದ ಹುಡುಗಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಬರೆದುಕೊಂಡಿದ್ದಾರೆ. ಈ ಫೋಟೋಗಳಿಗೆ ಸುಮಾರು 2 ಸಾವಿರ ಲೈಕ್ಸ್ ಬಂದಿದೆ.
https://twitter.com/anj3llyfish/status/1156399884322238464

Leave a Reply