ಹಾಸನ: ಪತಿಯ ಲೈಂಗಿಕ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದ ವಿಜಯನಗರ ಬಡಾವಣೆಯಲ್ಲಿ ನಡೆದಿದೆ.
ನೇಹಾ ಷರೀಫ್ (19) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ನೇಹ ರಹಮಾನ್ ಷರೀಫ್ ಎಂಬವರ ಪುತ್ರಿಯಾಗಿದ್ದು, ನಾಲ್ಕು ತಿಂಗಳ ಹಿಂದೆಯಷ್ಟೆ ಆದಿಲ್ ಷರೀಫ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಇಂದು ನೇಹಾ ಕೀಟನಾಶಕ ಔಷಧಿ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆರೋಪಿ ಪತಿ ಒಬ್ಬ ಸೈಕೋ ಆಗಿದ್ದು, ಮದುವೆಯಾದ ದಿನದಿಂದ ನೇಹ ಮೇಲೆ ಅನುಮಾನ ಪಡುತ್ತಿದ್ದನು. ಅಷ್ಟೇ ಅಲ್ಲದೇ ನೇಹಾಗೆ ಬ್ಲೂ ಫಿಲಂ ತೋರಿಸುತ್ತಿದ್ದು, ಅದೇ ರೀತಿ ಮಾಡು ಎಂದು ಪ್ರತಿದಿನ ಲೈಂಗಿಕವಾಗಿ ಹಿಂಸೆ ಕೊಡುತ್ತಿದ್ದನು ಎಂದು ತಿಳಿದು ಬಂದಿದೆ. ಪತಿಯ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಇಂದು ನೇಹಾ ಮನೆಯಲ್ಲಿಯೇ ಕೀಟನಾಶಕ ಔಷಧಿ ಕುಡಿದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ನೇಹ ಮೃತಪಟ್ಟಿದ್ದಾರೆ.

ಇತ್ತ ಪತ್ನಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಆರೋಪಿ ಪತಿ ನಾಪತ್ತೆಯಾಗಿದ್ದಾನೆ. ಆರೋಪಿ ಪತಿ ಆದಿಲ್ ಷರೀಫ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮೃತ ನೇಹಾ ಪೋಷಕರು ಆಗ್ರಹಿಸಿದ್ದಾರೆ. ಸದ್ಯಕ್ಕೆ ಶವಪರೀಕ್ಷೆಗಾಗಿ ನೇಹಾ ಮೃತ ದೇಹವನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಪೆನ್ಶನ್ ಮೊಹಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply