ಕಾವೇರಿ ನದಿಯಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಯುವಕ-ಯುವತಿಯ ಶವ ಪತ್ತೆ!

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನಸಮುದ್ರ ಬಳಿ ಕಾವೇರಿ ನದಿಯಲ್ಲಿ ಜೋಡಿ ಶವ ಸಿಕ್ಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪೋಷಕರೇ ಮರ್ಯಾದಾ ಹತ್ಯೆ ಮಾಡಿ ಶವವನ್ನು ಕಾವೇರಿ ನದಿಯ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ನಂದೀಶ್(25) ಮತ್ತು ಸ್ವಾತಿ(21) ಮೃತ ನವದಂಪತಿ. ನವ ದಂಪತಿ ತಮಿಳುನಾಡಿನ ಹೊಸೂರು ಜಿಲ್ಲೆಯ ಕೃಷ್ಣಗಿರಿ ತಾಲೂಕಿನವರು ಎಂಬ ಮಾಹಿತಿ ಲಭ್ಯವಾಗಿದೆ. ಈ ಜೋಡಿ ಇತ್ತೀಚೆಗೆ ಮನೆಯವರ ವಿರೋಧ ಇದ್ದುದ್ದರಿಂದ ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?
ನವೆಂಬರ್ 14 ರಂದು ಶಿವನಸಮುದ್ರ ಬಳಿಯ ಕಾವೇರಿ ನದಿಯಲ್ಲಿ ಮೊದಲು ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಯುವಕ ನಂದೀಶ್ ಶವ ಪತ್ತೆಯಾಗಿತ್ತು. ಆದರೆ ಗುರುವಾರ ಅದೇ ಜಾಗದಲ್ಲಿ ಸ್ವಾತಿ ಶವ ಪತ್ತೆಯಾಗಿತ್ತು. ಇಬ್ಬರನ್ನೂ ಒಂದೇ ರೀತಿ ಕೊಲೆ ಮಾಡಿ ನದಿಗೆ ಎಸೆದಿದ್ದರಿಂದ ಇದು ಮರ್ಯಾದಾ ಹತ್ಯೆ ಎಂಬ ಶಂಕೆ ಮೂಡಲು ಕಾರಣವಾಗಿತ್ತು.

ಈ ಬಗ್ಗೆ ಬೆಳಕವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಬಳಿಕ ತಮಿಳುನಾಡಿನ ಹೊಸೂರು ಠಾಣೆಯಲ್ಲಿ ಇತ್ತೀಚೆಗಷ್ಟೇ ಪ್ರೀತಿಸಿ ಮದುವೆಯಾಗಿದ್ದ ಜೋಡಿ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ತಕ್ಷಣ ತಮಿಳುನಾಡಿಗೆ ತೆರಳಿರುವ ಬೆಳಕವಾಡಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಯುವ ಜೋಡಿ ಬೇರೆ ಬೇರೆ ಜಾತಿಯವರಾಗಿದ್ದು, ಪ್ರೀತಿಸಿ ಮದುವೆಯಾಗಿದ್ದರಿಂದ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗುತ್ತಿದೆ. ಸದ್ಯ ಬೆಳಕವಾಡಿ ಪೊಲೀಸರು ಕೊಲೆಯಾದ ಯುವ ಜೋಡಿಯ ಪೋಷಕರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಸದ್ಯಕ್ಕೆ ಹುಡುಗಿಯ ತಂದೆ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *