ಮುಂಬೈ: ಬಾಲಿವುಡ್ಗೆ ಈಗ ತಾನೆ ಎಂಟ್ರಿ ಕೊಡುತ್ತಿರುವ ನಟ ನಿಶಾಂತ್ ಮಲ್ಕಾನಿಗೆ ಸೆಕ್ಸಿ ಹಾಟೆಸ್ಟ್ ಬ್ಯೂಟಿ ರಿಯಾ ಸೇನ್ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂಬ ಸುಳಿದಾಡುತ್ತಿತ್ತು. ಸದ್ಯ ಈ ಗಾಸಿಪ್ ಸುದ್ದಿಗೆ ನಟ ನಿಶಾಂತ್ ಸ್ಪಷ್ಟನೆ ನೀಡಿದ್ದಾರೆ.
ರಾಗಿಣಿ ಎಂಎಂಎಸ್ ರಿಟರ್ನ್ ಚಿತ್ರದ ಬೆಡ್ ರೂಮ್ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. ಅದರಲ್ಲಿ ನಾನು ಮತ್ತು ನಟಿ ರಿಯಾ ಸೇನ್ ಕೂಡ ಸನ್ನಿವೇಶಕ್ಕೆ ತಕ್ಕಂತೆ ಪಾತ್ರದೊಳಗೆ ಪ್ರವೇಶ ಮಾಡಬೇಕಿತ್ತು. ಹೀಗಾಗಿ ರಿಯಾ ಸೇನ್ ನನ್ನ ಟ್ರ್ಯಾಕ್ ಪ್ಯಾಂಟ್ನ್ನು ಎಳೆದರು. ಆದರೆ ಕೆಲವರು ರಿಯಾ ಸೇನ್ ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಹೇಳತೊಡಗಿದರು. ಈ ಸುದ್ದಿ ಕೇಳಿದ ನಾನು ನಿಜಕ್ಕೂ ಆಶ್ಚರ್ಯ ಚಕಿತನಾಗುವಂತೆ ಮಾಡಿತು. ಆದರೆ ಈ ಸುದ್ದಿಗಳೆಲ್ಲಾ ಸುಳ್ಳು ಎಂದು ನಿಶಾಂತ್ ತಿಳಿಸಿದ್ದಾರೆ.

ನಾವಿಬ್ಬರೂ ಕೇವಲ ತಮಾಷೆಗೆ ಮಾಡಿದ್ದು, ಈ ರೀತಿ ಮಾಡುವುದರಿಂದ ಲವ್ ಸೀನ್ಗಳು ಉತ್ತಮ ರೀತಿ ಬರಲು ಸಾಧ್ಯ. ರಿಯಾ ಸೇನ್ ನನ್ನ ಪ್ಯಾಂಟ್ ಎಳೆದಿದ್ದು ಕೇವಲ ಸಿನಿಮಾಗಾಗಿ ಮತ್ತು ಸಿನಿಮಾದ ಸನ್ನಿವೇಶಕ್ಕಾಗಿ ಅಷ್ಟೆ. ಅವರ ಪತಿಯೂ ಸಹ ಇದರ ಬಗ್ಗೆ ಚಿಂತಿಸಿಲ್ಲ. ಲೈಂಗಿಕ ದೌರ್ಜನ್ಯದ ವಿಚಾರಗಳು ತುಂಬಾ ಸೂಕ್ಷ್ಮ ಸಂಗತಿಗಳು ಎಂದು ನಿಶಾಂತ್ ಬೇಸರ ವ್ಯಕ್ತಪಡಿಸಿದರು.
ನಿಶಾಂತ್ ಮತ್ತು ರಿಯಾ ಇಬ್ಬರೂ ಜೊತೆಯಾಗಿ ರಾಗಿಣಿ ಎಂಎಂಎಸ್ ರಿಟರ್ನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ರಾಗಿಣಿ ಚಿತ್ರದ ಎರಡು ಭಾಗಗಳು ತೆರೆಕಂಡು ಭಾರೀ ಯಶಸ್ವಿಯನ್ನು ಪಡೆದುಕೊಂಡಿವೆ. ಏಕ್ತಾ ಕಪೂರ್ ನಿರ್ಮಾಣ ಸಂಸ್ಥೆಯಡಿಯಲ್ಲಿ ರಾಗಿಣಿ ಎಂಎಂಎಸ್ ಮೂಡಿ ಬರಲಿದೆ.
ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಪತಿಗೆ ಕಿಸ್ ಕೊಟ್ಟ ರಿಯಾ ಸೇನ್
https://www.instagram.com/p/BZGhmMYl4Jp/?tagged=raginimmsreturns
https://www.instagram.com/p/BZEkCvAAr6e/?tagged=raginimmsreturns
https://www.instagram.com/p/BZAtzbjlGqF/?tagged=raginimmsreturns

Leave a Reply