ಟೀಂ ಇಂಡಿಯಾ ಆಟಗಾರರ ಫೋಟೋ ಪೋಸ್ಟ್ ಮಾಡಿ ಜನರಿಗೆ ಎಚ್ಚರಿಕೆ ಕೊಟ್ಟ ಕಿವೀಸ್ ಪೊಲೀಸ್

ನೇಪಿಯರ್: ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯ ಗೆಲುವಿನ ವಿಶ್ವಾಸದಲ್ಲಿದೆ. ಇದೇ ವೇಳೆ ಟೀಂ ಇಂಡಿಯಾ ಆಟಗಾರರ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರುವ ಕಿವೀಸ್ ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ನ್ಯೂಜಿಲೆಂಡ್‍ನ ಈಸ್ಟರ್ನ್ ಡಿಸ್ಟ್ರಿಕ್ಟ್ ಪೊಲೀಸ್ ಫೇಸ್‍ಬುಕ್ ಪೋಸ್ಟ್ ಮಾಡಿದ್ದು, ಪೊಲೀಸರು ಈ ಸಮಯದಲ್ಲಿ ಎಚ್ಚರಿಕೆ ನೀಡುತ್ತಿದ್ದು, ಕಳೆದ ವಾರ ನೇಪಿಯರ್ ಹಾಗು ಮೌಂಟ್ ಮೌಂಗಾನೆ ನಲ್ಲಿ ನ್ಯೂಜಿಲೆಂಡ್ ಮುಗ್ಧರ ಗುಂಪನ್ನು ತೀವ್ರವಾಗಿ ಆಕ್ರಮಣ ಮಾಡಿರುವ ಬಗ್ಗೆ ಸಾಕ್ಷಿಗಳು ಲಭಿಸಿದೆ. ಆದ್ದರಿಂದ ಕ್ರಿಕೆಟ್ ಬ್ಯಾಟ್ ಅಥವಾ ಚೆಂಡನ್ನು ಕೊಂಡ್ಯೊಯುತ್ತಿದ್ದಾರೆ ನಿಮ್ಮ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ ಎಂದು ಅಪ್‍ಡೇಟ್ ಮಾಡಿಕೊಂಡಿದೆ.

5 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯವನ್ನು 8 ವಿಕೆಟ್ ಗಳಿಂದ ಗೆದ್ದು ಬಿಗಿದ್ದರೆ, 2ನೇ ಪಂದ್ಯವನ್ನು 90 ರನ್ ಗಳಿಂದ ಜಯಗಳಿಸಿ ಕಿವೀಸ್ ತಂಡಕ್ಕೆ ಶಾಕ್ ನೀಡಿತ್ತು. ಸರಣಿಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಫೀಲ್ಡಿಂಗ್‍ನಲ್ಲೂ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದೆ. ಇತ್ತ ಸೋಮವಾರ ಸರಣಿಯ 3ನೇ ಕ್ರಿಕೆಟ್ ಪಂದ್ಯ ನಡೆಯಲ್ಲಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಜೀವಂತವಾಗಿಡುವತ್ತ ಕಿವೀಸ್ ಆಟಗಾರರು ಗಮನ ಹರಿಸಿದ್ದಾರೆ.

ಇತ್ತ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿರುವ ಟೀಂ ಇಂಡಿಯಾ ಹೆಚ್ಚಿನ ಆತ್ಮವಿಶ್ವಾಸ ಹೊಂದಿದ್ದು, ವಿಶ್ವಕಪ್ ವೇಳೆಗೆ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಪ್ರಯತ್ನದಲ್ಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *