ಜಬರ್ದಸ್ತ್ ಡ್ಯಾನ್ಸ್- ಟೇಸ್ಟಿ ಟೇಸ್ಟಿ ಫುಡ್- 2020 ಸ್ವಾಗತಕ್ಕೆ ಉಡುಪಿ ಜನ ರೆಡಿ

ಉಡುಪಿ: ಹೊಸ ವರ್ಷಾಚರಣೆ ಪ್ರಾರಂಭವಾಗಿದ್ದು, ನಗರದ ಓಷ್ಯನ್ ಪರ್ಲ್ ಹೋಟೆಲ್ ನಲ್ಲಿ ಡಿಜೆ ವಿತ್ ಡ್ಯಾನ್ಸ್ ನಡೆಯುತ್ತಿದೆ. ಅಲ್ಲದೆ ಮಕ್ಕಳಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಯುವಕ ಯುವತಿಯರು 2019ಕ್ಕೆ ಗೋಲಿ ಮಾರ್ ಎಂದು 2020ನ್ನು ಸ್ಟೆಪ್ ಹಾಕುವ ಮೂಲಕ ಸ್ವಾಗತಿಸುತ್ತಿದ್ದಾರೆ.

ವೆರೈಟಿ ವೆರೈಟಿ ಸಸ್ಯಹಾರಿ ಹಾಗೂ ಮಾಂಸಹಾರಿ ಫುಡ್ ರೆಡಿಯಾಗಿದ್ದು, ಜನ ಮಸ್ತ್ ಮಜಾ ಮಾಡುತ್ತಿದ್ದಾರೆ. ಒಬ್ಬರಿಗೆ 2,499, ಒಂದು ಜೋಡಿಗೆ 3,499 ರೂಪಾಯಿ ಫಿಕ್ಸ್ ಮಾಡಲಾಗಿದೆ ಎಂದು ಸಂಸ್ಥೆಯ ಫೈನಾನ್ಸ್ ಮ್ಯಾನೇಜರ್ ಶುಭಕರ್ ಮಾಹಿತಿ ನೀಡಿದರು.

ಅನ್ ಲಿಮಿಟೆಡ್ ಡ್ರಿಂಕ್ಸ್, ಫುಡ್, ಡ್ಯಾನ್ಸ್, ಮಸ್ತಿ ಮಾಡುವ ಅವಕಾಶ ಇದೆ. 10 ಬಗೆಯ ಸ್ಟ್ರಾಟರ್, 25 ಡಿಶಸ್, 15 ಲೈವ್ ಕೌಂಟರ್, 2 ಡೆಸರ್ಟ್ ಕೌಂಟರ್, ಡ್ರಿಂಕ್ಸ್ ನಲ್ಲಿ 20 ಐಟಂ ಇದೆ. ನಾನ್ ವೆಜ್ ಸ್ಪೆಷಲ್ ಚಿಕನ್ ಕೊತ್ತು ಪರೋಟ, ಪ್ಯಾನೇಷ್ಯನ್ ಲೈವ್ ಇವತ್ತಿನ ಸ್ಪೆಷಲ್ ಎಂದು ಜನರಲ್ ಮ್ಯಾನೇಜರ್ ಮಥನ್ ಸೆಲ್ವರಾಜ್ ಮಾಹಿತಿ ನೀಡಿದರು. 12.30 ರವರೆಗೆ ಸಂಭ್ರಮಿಸಲು ಅವಕಾಶವಿದೆ.

Comments

Leave a Reply

Your email address will not be published. Required fields are marked *