ರಕ್ತ ಪರೀಕ್ಷೆಯಿಂದ ಕ್ಯಾನ್ಸರ್ ಕಂಡುಹಿಡಿಯುವ ಹೊಸ ತಂತ್ರಜ್ಞಾನ ಅಭಿವೃದ್ಧಿ

ಲಂಡನ್: ಕ್ಯಾನ್ಸರ್ ಲಕ್ಷಣ ಇಲ್ಲದಿದ್ದರೂ ರಕ್ತದ ಪರೀಕ್ಷೆಯ ಮೂಲಕ ಅದನ್ನು ಕಂಡುಹಿಡಿಯುವಂತಹ ತಂತ್ರಜ್ಞಾನವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಜನರಲ್ಲಿ ಕ್ಯಾನ್ಸರ್‌ನ ಪ್ರಾರಂಭಿಕ ಹಂತದಲ್ಲಿ ಅದರ ಲಕ್ಷಣವನ್ನು ಕಂಡುಹಿಡಿಯುವುದು ವೈದ್ಯರಿಗೆ ಒಂದು ಸವಾಲಿನ ವಿಷಯ. ಹಲವು ಬಾರಿ ರೋಗಿಗಳು ಕ್ಯಾನ್ಸರ್‌ನ ಪ್ರಾರಂಭದ ಹಂತದಲ್ಲಿ ವೈದ್ಯರಿಗೂ ತಿಳಿಯದೇ ಸಾಮಾನ್ಯ ಸಮಸ್ಯೆ ಎಂದುಕೊಂಡು ಕೊನೇ ಹಂತದಲ್ಲಿ ಜೀವವನ್ನೇ ಕಳೆದುಕೊಂಡಿರುವಂತಹ ಘಟನೆಗಳನ್ನು ನಾವು ಸಾಕಷ್ಟು ಬಾರಿ ನೋಡಿರುತ್ತೇವೆ.

ಕ್ಯಾನ್ಸರ್ ಕಂಡು ಹಿಡಿಯುವುದು ವೈದ್ಯರಿಗೂ ದೊಡ್ಡ ಸವಾಲು. ಹೀಗಿರುವಾಗ ವಿಜ್ಞಾನಿಗಳು ಹೊಸ ತಂತ್ರಜ್ಞಾನ ಕಂಡುಹಿಡಿದಿದ್ದಾರೆ. ಇದರ ಸಹಾಯದಿಂದ ರೋಗಿಗಳ ರಕ್ತದ ಮಾದರಿಯನ್ನು ಬಳಸಿಕೊಂಡು ಅವರಿಗೆ ಕ್ಯಾನ್ಸರ್ ಇದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ಕಂಡು ಹಿಡಿಯಬಹುದು ಎಂದಿದ್ದಾರೆ. ಇದನ್ನೂ ಓದಿ: 12,000 ಕೆಜಿ ತೂಕದ ಬಸ್ಸನ್ನು ಕೂದಲಿನಿಂದ ಎಳೆದ ಭಾರತೀಯ ಮಹಿಳೆ- Video Viral

ಸಂಶೋಧಕರು ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ರೋಸ್ಕೋಪಿ ತಂತ್ರಜ್ಞಾನವನ್ನು ಬಳಸಿಕೊಂಡು, ರಕ್ತದ ಅಣುವನ್ನು ಸರಿಯಾಗಿ ಪರಿಶೀಲನೆ ನಡೆಸುವ ಮೂಲಕ ಕ್ಯಾನ್ಸರ್ ರೋಗ ಪತ್ತೆ ಹಚ್ಚಬಹುದು ಎಂದು ತಿಳಿಸಿದ್ದಾರೆ.

ಈ ತಂತ್ರಜ್ಞಾನದ ಮೂಲಕ ಕ್ಯಾನ್ಸರ್‌ನ ಲಕ್ಷಣಗಳನ್ನು ಗುರುತಿಸಬಹುದು. ಸಂಶೋಧಕರು ಆಯಾಸ ಹಾಗೂ ತೂಕ ನಷ್ಟಗಳಂತಹ ಲಕ್ಷಣಗಳು ಹೊಂದಿದ್ದ 20 ರೋಗಿಗಳ ರಕ್ತದ ಕಣಗಳಲ್ಲಿ 19 ರೋಗಿಗಳಿಗೆ ಕ್ಯಾನ್ಸರ್ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಇದನ್ನೂ ಓದಿ: ಸ್ಟಾರ್‌ಲಿಂಕ್ ಇಂಡಿಯಾದ ಮುಖ್ಯಸ್ಥ ಸಂಜಯ್ ಭಾರ್ಗವ ರಾಜೀನಾಮೆ

ಈ ತಂತ್ರಜ್ಞಾನದ ಮೂಲಕ 2000 ದಿಂದ 3000 ಬ್ರಿಟಿಷ್ ರೋಗಿಗಳಲ್ಲಿ ಕ್ಯಾನ್ಸರ್ ಅನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿದ್ದಾರೆ. ಈ ತಂತ್ರಜ್ಞಾನ ಜಾಗತಿಕವಾಗಿ ಬಳಕೆಯಾದಲ್ಲಿ ಕ್ಯಾನ್ಸರ್‌ಅನ್ನು ವೇಗವಾಗಿ ಪತ್ತೆ ಹಚ್ಚಿ, ರೋಗಿಯ ಜೀವ ಉಳಿಸಲು ಸಹಾಯವಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *