ನಿನ್ನ ಯಾರು ಮದುವೆ ಆಗ್ತಾರೆ ಎಂದು ಗೇಲಿ ಮಾಡಿದವರಿಗೆ ಗೀತಾ ಭಟ್ ಖಡಕ್ ಉತ್ತರ

ಕಿರುತೆರೆಯ `ಬ್ರಹ್ಮಗಂಟು'(Bhramagantu) ಸೀರಿಯಲ್‌ನ ಗುಂಡಮ್ಮ ಆಗಿ ಮನಗೆದ್ದ ನಟಿ ಗೀತಾ ಭಾರತಿ ಭಟ್(Geetha Bharathi Bhat) ಬಳಿಕ ಬಿಗ್ ಬಾಸ್‌ನಲ್ಲಿ ಮಿಂಚಿದ್ದರು. ಇದೀಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ತಮ್ಮ ಜೀವನ ಕಥೆ ಹೇಳಿ ವೇದಿಕೆಯ ಮೇಲೆ ನಟಿ ಭಾವುಕರಾಗಿದ್ದಾರೆ.

ಗೀತಾ(Geetha Bhat) ಕಿರುತೆರೆ ಲಗ್ಗೆ ಇಟ್ಟಿದ್ದೇ ಅನಿರೀಕ್ಷಿತವಾಗಿ ಆದರೆ ಇವರು ಎದುರಿಸಿದ ಕಷ್ಟಗಳು ಅದೆಷ್ಟೋ ಜನರಿಗೆ ಸ್ಪೂರ್ತಿ ಎಂದೇ ಹೇಳಬಹುದು. ಅಂದು ದಪ್ಪಗಿದ್ದ ಗುಂಡಮ್ಮ ಇಂದು ಸಣ್ಣಮ್ಮ ಆಗಿದ್ದಾರೆ. ದಪ್ಪಗಿದ್ದ ಸಮಯದಲ್ಲಿ ನಿನ್ನ ಯಾರು ಮದುವೆಯಾಗುತ್ತಾರೆ ಎಂದು ಹೀಯಾಳಿಸಿದ ಅದೆಷ್ಟೋ ಜನರಿಗೆ ಖಾಸಗಿ ವಾಹಿನಿಯ `ಸೂಪರ್ ಕ್ವೀನ್'(Super Queens) ವೇದಿಕೆಯ ಮೂಲಕ ನಟಿ ಉತ್ತರ ಕೊಟ್ಟಿದ್ದಾರೆ.

ಕಾಲೇಜಿನಲ್ಲಿ ಇದ್ದಾಗ, ಸ್ಕೂಲ್‌ನಲ್ಲಿ ಇದ್ದಾಗ ನಾನು ಈ ರೀತಿ ದಪ್ಪ ಇರುವುದರಿಂದ ತುಂಬಾ ಜನ ಗೇಲಿ ಮಾಡ್ತಾ ಇದ್ರು. ತುಂಬಾ ಜನ ತಮಾಷೆ ಮಾಡ್ತಾ ಇದ್ರು. ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಿದ್ರು. ಡುಮ್ಮಿ, ಆಲದ ಮರ, ಪೂರಿ ಮೂಟೆ ಏನೇನೋ ಹೇಳ್ತಾ ಇದ್ರು. ಯಾವ ರೇಷನ್ ಅಕ್ಕಿ ತಿನ್ನಿಸುತ್ತೀರಾ, ನಿಮ್ಮ ಮಗಳಿಗೆ ಎಂದು ನಮ್ಮ ಅಪ್ಪ ಅಮ್ಮನ ಬಳಿ ಕೇಳ್ತಾ ಇದ್ರು. ನಿನ್ನ ಯಾರು ಮದುವೆ ಆಗ್ತಾರೆ ಎಂದು ಕೇಳ್ತಾ ಇದ್ರು. ಇದನ್ನೂ ಓದಿ:ತಿರುಪತಿಯಲ್ಲಿ ಅವಳಿ ಮಕ್ಕಳ ಮುಡಿ ಕೊಟ್ಟ ಅಮೂಲ್ಯ ಜಗದೀಶ್ ದಂಪತಿ

ಆಗ ನನಗೆ ಮನಸ್ಸಿಗೆ ಒಂದು ರೀತಿ ಹಿಂಸೆ ಆಗ್ತಾ ಇತ್ತು. ಆದ್ರೆ ಈ ತರದ್ದು ಒಂದು ಅವಕಾಶ ಬರುತ್ತೆ. ನನಗೆ ಇರೋ ಒಂದು ಮೈನಸ್ ಪ್ಲಸ್ ಆಗಿ ಬದಲಾಗುತ್ತೆ ಅಂತ ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಅಲ್ಲಿಂದ ಇಲ್ಲಿಗೆ ಬರೋಕೆ ಒಂದು ಜರ್ನಿ ಇತ್ತಲ್ಲ, ಆ ಜರ್ನಿಯಲ್ಲಿ ತುಂಬಾ ಕಲಿತಿದ್ದೇನೆ. ತುಂಬಾ ವಿಷಯಗಳನ್ನು ಕಳ್ಕೊಂಡಿದೀನಿ, ಪಡೆದುಕೊಂಡಿದ್ದೇನೆ. ನಾನು 30 ಕೆ.ಜಿ ತೂಕ ಕಳೆದುಕೊಂಡಿದ್ದೇನೆ. ಇನ್ನೂ 30 ಕೆಜಿ ತೂಕ ಕಳೆದುಕೊಳ್ಳುವ ಗೋಲ್ ಇದೆ ಎಂದು ಗೀತಾ ಭಟ್ ಹೇಳಿದ್ದಾರೆ. ಚಿಕ್ಕ ವಯಸ್ಸಿನಿಂದ ನನಗೆ ಇರೋ ವಿಶ್ ಅಂದ್ರೆ ಅಪ್ಪನನ್ನು ಹಗ್ ಮಾಡಬೇಕು ಎನ್ನುವುದಂತೆ. ನಾನು ಇಲ್ಲಿಯವರೆಗೂ ಅಪ್ಪನನ್ನು ಒಂದು ಸಲವೂ ಹಗ್ ಮಾಡಿಲ್ಲ. ಅಪ್ಪನನ್ನು ಹಗ್ ಮಾಡಿ ಭಾವುಕರಾಗಿದ್ದಾರೆ.

ರೂಪೇಶ್ ಶೆಟ್ಟಿ ಜೊತೆ `ಮಂಕು ಭಾಯ್ ಫಾಕ್ಸಿ ರಾಣಿ’ ಚಿತ್ರದಲ್ಲಿ ನಾಯಕಿಯಾಗಿ ಗೀತಾ ನಟಿಸಿದ್ದಾರೆ. ಸಂತೋಷ್ ಕೊಡಂಕೇರಿ ನಿರ್ದೇಶನದ ಚಿತ್ರದಲ್ಲೂ ಗೀತಾ ಫೀಮೇಲ್ ಲೀಡ್ ಆಗಿ ನಟಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *