ಮತಕ್ಕಾಗಿ ಸಿಎಂ ಟೀಂ ನಿಂದ ಹೊಸ ತಂತ್ರ- ಮತದಾರರ ಮಕ್ಕಳಿಗೆ ಹಣ ಹಂಚಿಕೆ!

ಬಳ್ಳಾರಿ: ಚುನಾವಣೆ ಬಂದಾಗೆಲ್ಲಾ ರಾಜಕೀಯ ಪಕ್ಷಗಳು ಮತದಾರರಿಗೆ ಹಣ ಹಂಚೋದು ಕಾಮನ್. ಆದ್ರೆ ಸಿದ್ದರಾಮಯ್ಯ ಸರ್ಕಾರ ಮಾತ್ರ ಇದೀಗ ಮತದಾರರ ಮಕ್ಕಳಿಗಳು ಕೂಡ ಹಣ ಹಂಚಲು ಹೊರಟಿದೆ.

ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಮೈನಿಂಗ್ ಫಂಡ್‍ನ 266 ಕೋಟಿ ರೂಪಾಯಿಯನ್ನು ಸುಮಾರು 20 ಸಾವಿರ ಮಕ್ಕಳಿಗೆ ಫೆಲೋಶಿಪ್ ಹೆಸರಲ್ಲಿ ಹಂಚಲು ಮುಂದಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಕುಟುಂಬದ ಮತಗಳನ್ನು ಕಾಂಗ್ರೆಸ್‍ನತ್ತ ಸೆಳೆಯಲು ಪ್ಲಾನ್ ಮಾಡಿದೆ. ಆದ್ರೆ ಈ 266 ಕೋಟಿ ರೂಪಾಯಿ ಜಿಲ್ಲಾ ಮೈನಿಂಗ್ ಫಂಡ್ ಅನ್ನು ಸಾಮೂಹಿಕ ಒಳಿತಿಗಾಗಿಯೇ ಬಳಸಬೇಕೆಂಬ ನಿಯಮವಿದೆ.

ಜಿಲ್ಲಾಡಳಿತ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ 2 ಸಾವಿರ, ಪಿಯುಸಿ ವಿದ್ಯಾರ್ಥಿಗಳಿಗೆ ಎರಡೂವರೆ ಸಾವಿರ, ಡಿಗ್ರಿ ವಿದ್ಯಾರ್ಥಿಗಳಿಗೆ 4 ಸಾವಿರ ರೂಪಾಯಿ ಹಂಚಲು ಮುಂದಾಗಿದೆ. ಇದಕ್ಕಾಗಿ ಸೋಮವಾರ ಹೊಸಪೇಟೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಬೃಹತ್ ಸಮಾವೇಶ ಸಹ ಏರ್ಪಡಿಸಲಾಗಿದೆ.

ಬಳ್ಳಾರಿ ಜಿಲ್ಲೆಯ ಬಹುತೇಕ ಶಾಲಾ ಕಾಲೇಜುಗಳಲ್ಲಿ ಶೌಚಾಲಯ, ಕೊಠಡಿಗಳು ಇಲ್ಲದಿದ್ದರೂ ಚುನಾವಣಾ ಲಾಭಕ್ಕಾಗಿ ಮಕ್ಕಳಿಗೆ ಹಣ ಹಂಚಲು ಮುಂದಾಗಿರೋದು ಶಿಕ್ಷಣ ತಜ್ಞರು ಮತ್ತು ಗಣಿ ಬಾಧಿತ ಪ್ರದೇಶಗಳ ಜನರ ಆಕ್ರೋಶಕ್ಕೆ ಕಾರಣವಾಗಿದೆ.

Comments

Leave a Reply

Your email address will not be published. Required fields are marked *