ನನ್ನ ಮೇಲೆ ದ್ವೇಷ ಇದ್ದರೆ ಪ್ರತಿಕೃತಿಯನ್ನು ಸುಟ್ಟುಹಾಕಿ, ಸಾರ್ವಜನಿಕ ಆಸ್ತಿಯನಲ್ಲ – ಮೋದಿ

– ನಾವು ಸಮಸ್ಯೆಗಳನ್ನು ಮುಂದುವರಿಸುವುದಿಲ್ಲ, ಬಗೆಹರಿಸುತ್ತೇವೆ

ನವದೆಹಲಿ: ನನ್ನ ಮೇಲೆ ದ್ವೇಷ ಇದ್ದರೆ ನನ್ನ ಪ್ರತಿಕೃತಿಯನ್ನು ಸುಟ್ಟು ಹಾಕಿ, ಸಾರ್ವಜನಿಕ ಆಸ್ತಿಗಳನಲ್ಲ ಎಂದು ಪ್ರಧಾನಿ ನರೇಂದ್ರ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಪ್ರತಿಭಟನಾಕಾರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಮುಸ್ಲಿಂ ಮತ್ತು ಹಿಂದೂಗಳಿಗೆ ಸಂಬಂಧಿಸದಲ್ಲ ಭಾರತದ ಮೂಲ ನಿವಾಸಿಗಳು ನೀವ್ಯಾರು ಆತಂಕ ಪಡುವ ಅಗತ್ಯ ಇಲ್ಲ ಎಂದು ಅಭಯ ನೀಡಿದ್ದಾರೆ. ಅಕ್ರಮ ಕಾಲೋನಿಗಳನ್ನು ಸಕ್ರಮ ಮಾಡಿದ ಹಿನ್ನೆಲೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮೋದಿ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ಸೇರಿ ಕೆಲವು ವಿರೋಧ ಪಕ್ಷಗಳ ಪರದೆ ಹಿಂದೆ ಕೂತು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ನಕಲಿ ವಿಡಿಯೋಗಳ ಮೂಲಕ ಜನರನ್ನು ಉದ್ವೇಗಕ್ಕೆ ಒಳಡಪಸುತ್ತಿದ್ದಾರೆ. ಇದುವರೆಗೆ ಭಾರತದಲ್ಲಿ ಯಾವುದೇ ನಿರಾಶ್ರಿತರ ಕೇಂದ್ರಗಳನ್ನೇ ಸ್ಥಾಪಿಸಿಲ್ಲ. ಸುಖಾಸುಮ್ಮನೆ ಆರೋಪ ಮಾಡುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ ನಾವು ಸಮಸ್ಯೆಗಳನ್ನು ಮುಂದುವರಿಸಿಕೊಂಡು ಹೋಗುವುದಿಲ್ಲ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ ಎಂದರು.

ಚಳಿಗಾಲದ ಅಧಿವೇಶನ ಒಂದರಲ್ಲಿ ನಾವು 40 ಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆ ಕೊಡುವ ನಿಟ್ಟಿನಲ್ಲಿ ಅಕ್ರಮ ಕಾಲೋನಿಗಳ ಸಕ್ರಮಕ್ಕೆ ಬಿಲ್ ಪಾಸ್ ಮಾಡಿದ್ದೇವೆ. ಅದೇ ಅಧಿವೇಶನದಲ್ಲಿ ದೇಶದ ಜನರನ್ನು ದೇಶ ಬಿಟ್ಟು ಕಳಿಸುವ ಬಿಲ್ ಪಾಸ್ ಮಾಡು ಮಾಡುತ್ತೇವಾ? ವಿಪಕ್ಷಗಳ ನಾಯಕರು ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಕೈಯಿಂದ ಆಗದ ಕೆಲಸವನ್ನು ನಾವು ಮಾಡಿದ್ದೇವೆ ಇದರಿಂದ ಲಕ್ಷಾಂತರ ಜನರು ನೆಮ್ಮದಿಯಿಂದ ಬದುಕಲಿದ್ದಾರೆ. ಪಾರ್ಲಿಮೆಂಟ್ ತೆಗೆದುಕೊಂಡಿರುವ ಈ ನಿರ್ಧಾರವನ್ನು ಎಲ್ಲರೂ ಎದ್ದು ನಿಂತು ಬೆಂಬಲಿಸಬೇಕು ಎಂದು ಮೋದಿ ಕರೆ ನೀಡಿದ್ದರು. ಅಲ್ಲದೇ ಎನ್.ಆರ್.ಸಿ ನಾವು ಜಾರಿ ಮಾಡಿದಲ್ಲ ಕಾಂಗ್ರೆಸ್ ಸಮಯದಲ್ಲೇ ಈ ಪ್ರಸ್ತಾವನೆ ಇತ್ತು ಸುಪ್ರೀಂಕೋರ್ಟ್ ನಿರ್ದೇಶನ ಮೇರೆಗೆ ನಾವು ಅಸ್ಸಾಂನಲ್ಲಿ ಮಾತ್ರ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಪ್ರಯತ್ನಪಟ್ಟಾಗ ಯಾಕೆ ಯಾರು ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಮೋದಿ ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಆಯುಷ್ಮಾನ್, ಉಜ್ವಲ್ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇಲ್ಲಿ ಯಾರಿಗೂ ಜಾತಿ ಕೇಳಿ ಸೌಲಭ್ಯಗಳನ್ನು ವಿತರಿಸಿಲ್ಲ. ಭಾರತೀಯ ನಾಗರಿಕರು ಎಲ್ಲರೂ ಕೇಂದ್ರ ಸರ್ಕಾರದ ಲಾಭ ಪಡೆದಿದ್ದಾರೆ. ಪೌರತ್ವ ತಿದ್ದುಪಡಿ ವಿಚಾರದಲ್ಲಿ ನಾವು ಜಾತಿ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟಪಡಿದರು. ದಲಿತರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ದಲಿತರ ಅಭಿವೃದ್ಧಿ ಮಾತನಾಡುವ ವಿಪಕ್ಷ ನಾಯಕರು ಏನು ಮಾಡಿಲ್ಲ. ದಲಿತರು ಇನ್ನು ಅದೇ ಪರಿಸ್ಥಿತಿಯಲ್ಲಿದ್ದಾರೆ. ಪೌರತ್ವ ಕಾಯ್ದೆ ಪಾಕಿಸ್ತಾನ ಅಫ್ಘಾನಿಸ್ತಾನ ಬಾಂಗ್ಲಾದೇಶದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದವರಿಗೆ ನೆಲೆಯನ್ನು ನೀಡಲಿದೆ. ಪಾಕಿಸ್ತಾನದಲ್ಲಿ ದಲಿತರು ಇಂದೂ ಕೂಡಾ ಚಹಾದ ಜೊತೆಗೆ ಲೋಟದ ಹಣವನ್ನು ಸಂದಾಯ ಮಾಡಬೇಕು. ಅಲ್ಲದೇ ಆ ಲೋಟವನ್ನು ಚಹಾ ಕುಡಿದ ಬಳಿಕ ತೆಗೆದುಕೊಂಡು ಹೋಗಬೇಕು ಪಾಕಿಸ್ತಾನದಲ್ಲಿ ಒತ್ತಾಯ ಪೂರ್ವಕವಾಗಿ ಸಾಕಷ್ಟು ಮತಾಂತರಗಳಾಗಿವೆ. ಹೀಗೇ ಕಿರುಕುಳಕ್ಕೆ ಒಳಗಾದವರಿಗೆ ನಾವು ದೇಶದಲ್ಲಿ ನೆಲೆ ಕೊಡಲು ಬದ್ಧವಾಗಿದ್ದೇವೆ. ಇಂತಹ ಸಂಧರ್ಭದಲ್ಲಿ ನಮ್ಮ ಜನರನ್ನು ದೇಶ ಬಿಟ್ಟು ಕಳಿಸುತ್ತೇವೆ ಎನ್ನುವುದು ಶುದ್ಧ ಸುಳ್ಳು ಎಂದರು.

ದೆಹಲಿಯಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ. ಅದರೆ ರಾಜ್ಯ ಸರ್ಕಾರ ಸಹಕಾರ ನೀಡಿಲ್ಲ ಒಂದು ವೇಳೆ ರಾಜ್ಯ ಸರ್ಕಾರ ಸಹಕಾರ ನೀಡಿದ್ದರೇ ದೆಹಲಿಯಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಬಹುದಿತ್ತು. ಅದ್ಯಾಗೂ ದೆಹಲಿಯಲ್ಲಿ ಮೆಟ್ರೋ ವಿಸ್ತರಣೆ ಆಗಿದೆ ಹೈವೇ ಗಳನ್ನು ಮಾಡಿದ್ದೇವೆ ಶುದ್ಧ ಕುಡಿಯುವ ನೀರು ಕೊಡುತ್ತಿದ್ದೇವೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದರು.

Comments

Leave a Reply

Your email address will not be published. Required fields are marked *