ಧೋನಿ ಭವಿಷ್ಯ ಈಗಾಗಲೇ ನಿರ್ಧರವಾಗಿದೆ- ಎಂಎಸ್‍ಕೆ ಪ್ರಸಾದ್

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ, ಮಹೇಂದ್ರ ಸಿಂಗ್ ಧೋನಿ ಅವರ ಭವಿಷ್ಯ ಈಗಾಗಲೇ ನಿರ್ಧರವಾಗಿದೆ ಎಂದು ಟೀಂ ಇಂಡಿಯಾದ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಹೇಳಿದ್ದಾರೆ.

2019ರ ವಿಶ್ವಕಪ್ ಸೆಮಿಫೈನಲ್ ನಂತರ ಎಂ.ಎಸ್.ಧೋನಿ ಯಾವುದೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರ ನಿವೃತ್ತಿಯ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಎಸ್‍ಕೆ ಪ್ರಸಾದ್, ಧೋನಿ ಹಾಗೂ ನಾವೇಲ್ಲ ಸೇರಿ ನಿವೃತ್ತಿಯ ವಿಚಾರವಾಗಿ ಚೆರ್ಚೆ ಮಾಡಿದ್ದೇವೆ. ಈ ವೇಳೆ ಅವರ ಮುಂದಿನ ಭವಿಷ್ಯ ನಿರ್ಧಾರವಾಗಿದೆ ಎಂದು ಹೇಳಿದರು.

ಮಾಧ್ಯಮಗಳ ಜೊತೆ ಇಂದು ಮಾತನಾಡಿರುವ ಎಂಎಸ್‍ಕೆ, ಎಂಎಸ್ ಧೋನಿ ಅವರು ನನಗೆ ಮತ್ತು ಆಡಳಿತ ಮಂಡಳಿಗೆ ತಿಳಿಸಿರುವ ಹಾಗೇ ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟವಾಗಿದ್ದಾರೆ. ಇದು ಗೌಪ್ಯವಾಗಿರು ವಿಷಯವಾದ ಕಾರಣ ನಾನು ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ನಮ್ಮ ನಡುವೆ ಧೋನಿ ಅವರು ಚರ್ಚಿಸಿದ ಮತ್ತು ಹಂಚಿಕೊಂಡ ಯಾವುದೇ ವಿಷಯಗಳು ಗೌಪ್ಯವಾಗಿರುವುದು ಉತ್ತಮ. ಅದು ಅಲಿಖಿತ ಕೋಡ್ ಎಂದು ತಿಳಿಸಿದರು.

ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಐಪಿಎಲ್‍ಗೆ ಧೋನಿ ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಭರ್ಜರಿ ಅಭ್ಯಾಸ ನಡೆಸಿದೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ ಸ್ಫೋಟಕ ಬ್ಯಾಟಿಂಗ್ ಮಾಡಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸದ ವೇಳೆ ಎಂ.ಎಸ್.ಧೋನಿ ಸತತ ಐದು ಸಿಕ್ಸರ್ ಸಿಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸಿಎಸ್‍ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾರ್ಚ್ 3ರಂದು ಚೆನ್ನೈಗೆ ಆಗಮಿಸಿ, ಅಭ್ಯಾಸ ಆರಂಭಿಸಿದ್ದಾರೆ. ಜೊತೆಗೆ ತಂಡದ ಅನುಭವಿ ಆಟಗಾರ ಸುರೇಶ್ ರೈನಾ ಸೇರಿದಂತೆ ಕೆಲ ಆಟಗಾರರು ಈಗಾಗಲೇ ಚೆನ್ನೈನ ಚಿದಂಬರಂ ಮೈದಾನದಲ್ಲಿ ಕ್ರಿಕೆಟ್ ಅಭ್ಯಾಸ ನಡೆಸಿದ್ದಾರೆ. ಈ ಹಿಂದೆ ರಾಂಚಿಯಲ್ಲೂ ಕೂಡ ಧೋನಿ ಅವರು ರಣಜಿ ಆಟಗಾರರ ಜೊತೆ ಅಭ್ಯಾಸ ಮಾಡಿದ್ದರು.

Comments

Leave a Reply

Your email address will not be published. Required fields are marked *