ಪವಿತ್ರ ಗಂಗೆಯಲ್ಲಿ ಮಿಂದೆದ್ದ ರೋಡ್ಸ್‌ಗೆ ಹರ್ಭಜನ್ ವಿಶೇಷ ಮನವಿ

– ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಆಗುವ ಪ್ರಯೋಜನ ತಿಳಿಸಿದ ಜಾಂಟಿ

ನವದೆಹಲಿ: ಗಂಗಾ ನದಿಯಲ್ಲಿ ಮಿಂದೆದ್ದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್‌ಗೆ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು, ವಿಶೇಷ ಮನವಿಯನ್ನು ಸಲ್ಲಿಸಿದ್ದಾರೆ.

ಸಧ್ಯ ಭಾರತದಲ್ಲಿರುವ ಜಾಂಟಿ ರೋಡ್ಸ್ ಅವರು, ಬುಧವಾರ ಋಷಿಕೇಶಕ್ಕೆ ಹೋಗಿ ಅಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದಾರೆ. ಗಂಗೆಯಲ್ಲಿ ಮುಳಗಿರುವ ಫೋಟೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿರುವ ಜಾಂಟಿ, ಪವಿತ್ರ ಗಂಗೆಯ ತಣ್ಣೀರಿನಲ್ಲಿ ಮುಳುಗುವುದರಿಂದ ದೈಹಿಕ ಮತ್ತು ಆಧ್ಯಾತ್ಮಿಕ ಮೋಕ್ಷ ಸಿಗುತ್ತದೆ ಎಂದು ಬರೆದುಕೊಂಡಿದ್ದರು.

ಈ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ಹರ್ಭಜನ್ ಅವರು, ನೀವು ನನಗಿಂತ ಹೆಚ್ಚು ಭಾರತೀಯರನ್ನು ನೋಡಿದ್ದೀರಾ. ನೀವು ಪವಿತ್ರವಾದ ಗಂಗೆಯಲ್ಲಿ ಮುಳುಗಿ ಆನಂದಿಸುತ್ತಿರುವುದನ್ನು ನೋಡಲು ಬಹಳ ಸಂತೋಷವಾಗುತ್ತದೆ. ಮುಂದಿನ ಬಾರಿ ನೀವು ಅಲ್ಲಿಗೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗಿ ಎಂದು ಹರ್ಭಜನ್ ಸಿಂಗ್ ಅವರು ಟ್ವೀಟ್ ಮಾಡುವ ಮೂಲಕ ರೋಡ್ಸ್‌ಗೆ ಮನವಿ ಸಲ್ಲಿಸಿದ್ದಾರೆ.

ಈ ತಿಂಗಳ ಕೊನೆಯಲ್ಲಿ ಆರಂಭವಾಗುವ ಐಪಿಎಲ್ 2020ಯಲ್ಲಿ ಭಾಗವಹಿಸಲು ಜಾಂಟಿ ರೋಡ್ಸ್ ಇಂಡಿಯಾಗೆ ಬಂದಿದ್ದಾರೆ. ಈ ಆವೃತ್ತಿಯಲ್ಲಿ ಅವರು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಜಾಂಟಿ ಅವರು 2009 ರಿಂದ 2017ರ ವರೆಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವವಹಿಸಿದ್ದರು. ಈ ತಂಡ ಇವರ ಅವದಿಯಲ್ಲಿ ಮೂರು ಬಾರಿ ಕಪ್ ಗೆದ್ದಿತ್ತು.

2019 ರ ಡಿಸೆಂಬರ್ ನಲ್ಲಿ ಪಂಜಾಬ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಆಯ್ಕೆಯಾದ ರೋಡ್ಸ್, ಮುಂಬರುವ ಐಪಿಎಲ್ 2020ರಲ್ಲಿ ಅನಿಲ್ ಕುಂಬ್ಳೆ, ವೆಸ್ಟ್ ಇಂಡೀಸ್‍ನ ಕರ್ಟ್ನಿ ವಾಲ್ಷ್, ಭಾರತದ ಮಾಜಿ ಸ್ಪಿನ್ನರ್ ಮತ್ತು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಸುನಿಲ್ ಜೋಶಿ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಜಾರ್ಜ್ ಬೈಲಿಯವರನ್ನು ಸೇರಿಕೊಳ್ಳಲಿದ್ದಾರೆ.

ಭಾರತದ ಮೇಲೆ ವಿಶೇಷ ಪ್ರೀತಿ ಇಟ್ಟಿಕೊಂಡಿರುವ ಜಾಂಟಿ ರೋಡ್ಸ್, 2016ರಲ್ಲಿ ಜನಿಸಿದ ಅವರ ಮಗಳಿಗೆ ಇಂಡಿಯಾ ಎಂದು ನಾಮಕಾರಣ ಮಾಡಿದ್ದರು. ಜೊತೆಗೆ ನಾನು ಬಹುಕಾಲ ಇಂಡಿಯಾದಲ್ಲೇ ಸಮಯ ಕಳೆದಿದ್ದಾನೆ. ಇಲ್ಲಿನ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯದ ನನಗೆ ಬಹಳ ಇಷ್ಟ. ಇಂಡಿಯಾ ಒಂದು ಆಧ್ಯಾತ್ಮಿಕ ದೇಶ, ಬಹಳ ಮುಂದಾಲೋಚನೆಯ ರಾಷ್ಟ್ರ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *