ಬಸ್ ನಿಲ್ದಾಣದಲ್ಲಿ ಸಿಕ್ಕ ಚೀಲದಲ್ಲಿ ಸಿಕ್ತು ನವಜಾತ ಶಿಶು

ಕಾರವಾರ: ಬಸ್ ನಿಲ್ದಾಣದಲ್ಲಿರಿಸಿದ್ದ ಚೀಲದಲ್ಲಿ ನವಜಾತಶಿಶು ಸಿಕ್ಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗೌಡಳ್ಳಿ ಸಮೀಪದ ಖಾನ್ ನಗರದ ಬಸ್ ತಂಗುದಾಣದಲ್ಲಿ ನಡೆದಿದೆ.

ತಾಲೂಕಿನ ಕೂಗಿಲಕುಳಿ ಗ್ರಾಮದ ಮಾದೇವಿ ಎಂಬವರಿಗೆ ಈ ಮಗು ದೊರೆತಿದೆ. ಸದ್ಯ ಈ ಮಗುವನ್ನು ಶಿರಸಿಯ ಸಹಾಯ ಟ್ರಸ್ಟ್ ಗೆ ಹಸ್ತಾಂತರಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷ ಸತೀಶ್ ಶೆಟ್ಟಿ ಅನಾರೋಗ್ಯಕ್ಕೆ ತುತ್ತಾಗಿರುವ ಮಗುವನ್ನು ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಮಕ್ಕಳ ತುರ್ತು ನಿಗಾ ಘಟಕದಲ್ಲಿರಿಸಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪತ್ತೆಯಾಗಿದ್ದು ಹೇಗೆ?
ಮಾದೇವಿ ಅವರು ಪ್ರತಿದಿನ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಎಂದಿನಂತೆ ಇಂದು ನಿಲ್ದಾಣಕ್ಕೆ ಬಂದಾಗ ಚೀಲ ಪತ್ತೆಯಾಗಿದೆ. ಯಾರೋ ಮರೆತು ಹೋಗಿರಬೇಕು ಎಂದು ಆ ಚೀಲವನ್ನು ಮನೆಗೆ ತಂದು ನೋಡಿದ್ದಾರೆ. ಈ ವೇಳೆ ಚೀಲ ಬಿಚ್ಚುತ್ತಿದ್ದಂತೆ ಮಗು ಅಳುವುದು ಕೇಳಿಸಿದೆ. ಭಯಗೊಂಡ ಮಾದೇವಿ ಸ್ಥಳೀಯರಿಗೆ ಮಾಹಿತಿ ನೀಡಿ ನಂತರ ಪೊಲೀಸರಿಗೂ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ

ಅವಧಿಪೂರ್ವ ಜನಿಸಿದ ಶಿಶು ಇದಾಗಿದ್ದು, 1.6 ಕೆಜಿ ತೂಕ ಹೊಂದಿದೆ. ಜನಿಸಿ ನಾಲ್ಕು ದಿನ ಆಗಿರುವ ಸಾಧ್ಯತೆಗಳಿದ್ದು ಮಗುವಿನ ಎಡಗೈ ಮುಂಭಾಗದ ಮೂಳೆ ಬೆಳವಣಿಗೆ ಕುಂಟಿತವಾಗಿದ್ದು, ಆರು ಬೆರಳನ್ನು ಹೊಂದಿದೆ. ಗಾಳಿ, ಮಳೆಯ ವಾತಾವರಣದಲ್ಲಿದ್ದ ಕಾರಣ ಮಗುವಿನ ಆರೋಗ್ಯ ಹದಗೆಟ್ಟಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಪ್ರಕರಣ ಸಹ ದಾಖಲಾಗಿದ್ದು ಮಗುವಿನ ಪೋಷಕರ ಪತ್ತೆಗೆ ಪ್ರಯತ್ನ ಸಾಗುತ್ತಿದೆ. ಇದನ್ನೂ ಓದಿ: ಹೂ ಬೆಳೆಗಾರರಿಗೆ ‘ವರ’ ತಂದ ಶ್ರಾವಣ ಮಾಸದ ‘ಮಹಾಲಕ್ಷ್ಮಿ’

Comments

Leave a Reply

Your email address will not be published. Required fields are marked *