ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಯ 498 ರನ್ ಸಿಡಿಸಿದ ಇಂಗ್ಲೆಂಡ್ – ಮೈದಾನದೆಲ್ಲೆಡೆ ಸಿಕ್ಸರ್, ಬೌಂಡರಿಗಳ ಅಬ್ಬರ

ಆಂಸ್ಟರ್‌ಡ್ಯಾಮ್‌: ನೆದರ್‌ಲ್ಯಾಂಡ್‌ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್‍ನಲ್ಲಿ 498 ರನ್ ಬಾರಿಸಿ ವಿಶ್ವ ದಾಖಲೆ ಬರೆದಿದೆ.

ಟಾಸ್ ಗೆದ್ದ ನೆದರ್‌ಲ್ಯಾಂಡ್‌ ತಂಡ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಇತ್ತ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್‌ಗಳು ನೆದರ್‌ಲ್ಯಾಂಡ್‌ ತಂಡದ ಬೌಲರ್‌ಗಳ ಚೆಂಡನ್ನು ಮೈದಾನದ ಅಷ್ಟ ದಿಕ್ಕುಗಳಿಗೆ ಅಟ್ಟುತ್ತ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 498 ರನ್‍ಗಳ ದಾಖಲೆಯ ಮೊತ್ತ ಪೇರಿಸಿತು. ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕೆ.ಎಲ್.ರಾಹುಲ್‌ಗಿಲ್ಲ ಅವಕಾಶ?

ಈ ಮೂಲಕ ಇಂಗ್ಲೆಂಡ್ ತಂಡ ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಕಳೆದುಕೊಂಡು 481 ರನ್‍ಗಳನ್ನು ಸಿಡಿಸಿ ಬರೆದಿದ್ದ ದಾಖಲೆಯನ್ನು ಮುರಿದು ಮರು ದಾಖಲೆಯನ್ನು ಬರೆದಿದೆ. ಇದನ್ನೂ ಓದಿ: ಐರ್ಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ – ಹಾರ್ದಿಕ್ ಪಾಂಡ್ಯ ನಾಯಕ, ತ್ರಿಪಾಠಿಗೆ ಕರೆ

https://twitter.com/NaveenG77168184/status/1537799779987558401

ಇಂಗ್ಲೆಂಡ್‍ನ ಈ ಬೃಹತ್ ಮೊತ್ತಕ್ಕೆ ಕಾರಣವಾದವರು ಫಿಲ್ ಸಾಲ್ಟ್, ಡೇವಿಡ್ ಮಲನ್, ಜೋಸ್ ಬಟ್ಲರ್ ಮತ್ತು ಲಿಯಾಮ್ ಲಿವಿಂಗ್‍ಸ್ಟೋನ್ ಈ ನಾಲ್ವರು ಬ್ಯಾಟ್ಸ್‌ಮ್ಯಾನ್‌ಗಳು ನೆದರ್‌ಲ್ಯಾಂಡ್‌ ಬೌಲರ್‌ಗಳು ಕನಸಿನಲ್ಲೂ ನೆನಪಿಸಿಕೊಳ್ಳುವಂತೆ ಬ್ಯಾಟ್‍ಬೀಸಿದರು. ಅದರಲ್ಲೂ ಬಟ್ಲರ್ ಮತ್ತು ಲಿವಿಂಗ್‍ಸ್ಟೋನ್ ಸಿಡಿಸಿದ ಸಿಕ್ಸರ್‌ಗಳಂತೂ ಮೈದಾನದ ಹೊರಗಡೆ ಬೀಳತೊಡಗಿತು. ಫಿಲ್ ಸಾಲ್ಟ್ 122 ರನ್ (93 ಎಸೆತ, 14 ಬೌಂಡರಿ, 3 ಸಿಕ್ಸ್), ಡೇವಿಡ್ ಮಲನ್ 125 ರನ್ (109 ಎಸೆತ, 9 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರೆ, ಬಟ್ಲರ್ ಅಜೇಯ 162 ರನ್ (70 ಎಸೆತ, 7 ಬೌಂಡರಿ, 14 ಸಿಕ್ಸ್) ಮತ್ತು ಲಿವಿಂಗ್‍ಸ್ಟೋನ್ 66 ರನ್ (22 ಎಸೆತ, 6 ಬೌಂಡರಿ, 6 ಸಿಕ್ಸ್) ಚಚ್ಚಿ ಅಬ್ಬರಿಸಿ ಬೊಬ್ಬಿರಿದರು.

ಇಂಗ್ಲೆಂಡ್‌ ತಂಡದ ದಾಖಲೆಯ ರನ್‌ ಜೊತೆ ಬಟ್ಲರ್‌ ವೇಗದ ಶತಕ ಬಾರಿಸಿ ತಮ್ಮ ಭರ್ಜರಿ ಬ್ಯಾಟಿಂಗ್‌ ಫಾರ್ಮ್‌ ಮುಂದುವರಿಸಿದ್ದಾರೆ.

Live Tv

Comments

Leave a Reply

Your email address will not be published. Required fields are marked *