ಕೆಲಸ ಇಷ್ಟವಿಲ್ಲವೆಂದರೆ ಕಂಪನಿ ತೊರೆಯಬಹುದು – ಉದ್ಯೋಗಿಗಳಿಗೆ ನೆಟ್‌ಫ್ಲಿಕ್ಸ್ ಸೂಚನೆ

ವಾಷಿಂಗ್ಟನ್: ನೆಟ್‌ಫ್ಲಿಕ್ಸ್ ತನ್ನ ಉದ್ಯೋಗಿಗಳಿಗೆ ನೀಡಿರುವ ಹೊಸ ಮಾರ್ಗಸೂಚಿಯಲ್ಲಿ ಹೊಸ ಬದಲಾವಣೆಗಳನ್ನು ತಂದಿದೆ. ಉದ್ಯೋಗಿಗಳು ತಾವು ಒಪ್ಪದ ವಿಷಯಗಳ ಮೇಲೆ ಕೆಲಸ ಮಾಡಲು ಸಿದ್ಧರಾಗಲು ನೆಟ್‌ಫ್ಲಿಕ್ಸ್ ಕೇಳಿದ್ದು, ಆ ವಿಷಯಗಳನ್ನು ಉದ್ಯೋಗಿಗಳು ಒಪ್ಪದೇ ಹೋದಲ್ಲಿ ಕಂಪನಿಯನ್ನು ತೊರೆಯಬಹುದು ಎಂದಿದೆ.

ನೆಟ್‌ಫ್ಲಿಕ್ಸ್ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತನ್ನ ಉದ್ಯೋಗಿಗಳಿಗೆ ನೀಡಲಾದ ಮಾರ್ಗಸೂಚಿಗಳನ್ನು ಬದಲಿಸಿದೆ. ತನ್ನ ಮಾರ್ಗಸೂಚಿಯಲ್ಲಿ ಉದ್ಯೋಗಿಗಳನ್ನು ತಾವು ಒಪ್ಪದ ಕೆಲಸಗಳನ್ನು ಮಾಡಲು ಸಿದ್ಧರಾಗುವಂತೆ ಹೇಳಿದ್ದು, ಇದನ್ನು ಬೆಂಬಲಿಸದ ಉದ್ಯೋಗಿಗಳು ಕಂಪನಿ ತ್ಯಜಿಸಬಹುದು ಎಂದು ಖಡಕ್ಕಾಗಿ ತಿಳಿಸಿದೆ. ಇದನ್ನೂ ಓದಿ: ಭಾರತದಲ್ಲಿ ಶೇ.50ರಷ್ಟು ಪ್ರವಾಸೋದ್ಯಮ ಕ್ಷೇತ್ರಕ್ಕೆ ಮೊಘಲರೇ ಕಾರಣ: ಮುಫ್ತಿ

ನೆಟ್‌ಫ್ಲಿಕ್ಸ್ ಕಳೆದ 18 ತಿಂಗಳುಗಳಲ್ಲಿ ತನ್ನ ಉದ್ಯೋಗಿಗಳೊಂದಿಗೆ ಆಂತರಿಕ ಸಾಂಸೃತಿಕ ಸಮಸ್ಯೆಗಳ ಕುರಿತು ಚರ್ಚಿಸಿದೆ. ಈ ಬಗ್ಗೆ ಕಂಪನಿ ತನ್ನ ಉದ್ಯೋಗಿಗಳಿಗೆ ಇಲ್ಲಿ ಕೆಲಸ ಮಾಡುವ ಬಗ್ಗೆ ಹೊಸ ಹಾಗೂ ಉತ್ತಮ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸೂಚಿಸಿದೆ.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ತನ್ನ ಆದಾಯವನ್ನು ಹೆಚ್ಚಿಸುವ ಒತ್ತಡದ ನಡುವೆ ಹೊಸ ಫೀಚರ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ತನ್ನ ಬಳಕೆದಾರರನ್ನು ಹೆಚ್ಚಿಸುವ ಹಿನ್ನೆಲೆ ಅಗ್ಗದ ಹಾಗೂ ಜಾಹಿರಾತುಗಳನ್ನು ತೋರಿಸುವ ಹೊಸ ಆಯ್ಕೆಗಳನ್ನು ಪರಿಚಯಿಸುವಲ್ಲಿ ಕೆಲಸ ಮಾಡುತ್ತಿದೆ. ಇದನ್ನೂ ಓದಿ: ದ್ವೇಷದ ವಾತಾವರಣ ಸೃಷ್ಟಿಸಿರುವ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಬ್ಯಾನ್‌ ಮಾಡಿ: ಫಾರೂಕ್‌ ಅಬ್ದುಲ್ಲಾ ಒತ್ತಾಯ

ಒಟ್ಟಾರೆಯಾಗಿ ಬಳಕೆದಾರರ ಅನುಭವವನ್ನು ಸುಧಾರಿಸಲು ನೆಟ್‌ಫ್ಲಿಕ್ಸ್ ಹೊಸ ಹೊಸ ಫೀಚರ್‌ಗಳನ್ನೂ ತರಲು ಮುಂದಾಗುತ್ತಿದೆ. ಹೊಸದಾಗಿ ಲೈವ್ ಸ್ಟ್ರೀಮ್ ಅನ್ನು ಹೊರ ತರುವ ಬಗ್ಗೆ ನೆಟ್‌ಫ್ಲಿಕ್ಸ್ ತಿಳಿಸಿದ್ದು, ಇದರಲ್ಲಿ ಲೈವ್ ಹಾಸ್ಯ ಕಾರ್ಯಕ್ರಮಗಳು ಹಾಗೂ ಸ್ಕ್ರಿಪ್ಟ್ ಮಾಡಲಾಗದ ಶೋಗಳು ಲಭ್ಯವಾಗಲಿದೆ. ಈ ಫೀಚರ್ ಸದ್ಯ ಪರೀಕ್ಷೆಯ ಹಂತದಲ್ಲಿದೆ ಎಂದು ತಿಳಿಸಿದೆ.

Comments

Leave a Reply

Your email address will not be published. Required fields are marked *