ನೆಲಮಂಗಲದ ಶ್ರೀ ರೇವಣ್ಣಸಿದ್ದೇಶ್ವರ ಸ್ವಾಮಿಯ ವಾರ್ಷಿಕೋತ್ಸವ ಸೋಮವಾರದಿಂದ ಆರಂಭ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಧರ್ಮೆಗೌಡನಪಾಳ್ಯದ ಶ್ರೀ ರೇವಣ್ಣಸಿದ್ದೇಶ್ವರ ಸ್ವಾಮಿಯ ವಾರ್ಷಿಕೋತ್ಸವವು ಇದೇ ಸೋಮವಾರದಿಂದ ಬುಧವಾರದವರೆಗೆ ನಡೆಯಲಿದೆ ಎಂದು ಶ್ರೀ ರೇವಣ್ಣಸಿದ್ದೇಶ್ವರ ಸ್ವಾಮಿ ಧತ್ತಿ ಟ್ರಸ್ಟ್ ನ ಅಧ್ಯಕ್ಷರಾದ ರೇವಣ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಂಡ್ಯದ ದೊಡ್ಡ ಅರಸೀನಕೆರೆಯ ನಂದಿ ಮತ್ತು ಬಸಪ್ಪನವರ ಆಗಮನ, ಗಣಪತಿ ಹೋಮ, ನವಗ್ರಹ ಪೂಜೆ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಅನ್ನಸಂರ್ತಪಣೆ ಏರ್ಪಡಿಸಲಾಗಿದೆ. ನಾಗಸಾಧು ಸಂತರಿಂದ, ಶಿವ ಯಜ್ಞ ಹೋಮ, ಹವನಾದಿಗಳು ಸೇರಿದಂತೆ, ಮಕರ ಸಂಕ್ರಾಂತಿ ದಿವಸ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಅಭಿಷೇಕ, ಕ್ಷೀರಾಭಿಷೇಕ, ಅಮೃತಾಭಿಷೇಕ, ಮೃತ್ಯಂಜಯ ಹೋಮ, ಯಜ್ಞ, ಜಲದುರ್ಗಮ್ಮ ತಾಯಿ, ಗುಂಡ್ಲುದಮ್ಮ ತಾಯಿಯ ಮೆರವಣಿಗೆ ಸಮಾರಂಭ ಆಯೋಜಿಸಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ರವಿ ವಿವರಿಸಿದ್ದಾರೆ.

ಕಳಲುಘಟ್ಟ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷೆ ಸೌಮ್ಯ ನಟರಾಜು ಮಾತನಾಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ತುಮಕೂರಿನ ವಿಧಾನ ಪರಿಷತ್ ಸದಸ್ಯರಾದ ಬಿಎಮ್‍ಎಲ್ ಕಾಂತರಾಜು, ಸ್ಥಳೀಯ ನೆಲಮಂಗಲ ಕ್ಷೇತ್ರದ ಶಾಸಕರಾದ ಡಾ.ಕೆ.ಶ್ರೀನಿವಾಸಮೂರ್ತಿ, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್, ವಿಶೇಷವಾಗಿ ನಾಗಸಾಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ದೇವರ ಕೃಪೆಗೆ ಪಾತ್ರರಾಗಲು ಎಲ್ಲಾ ಭಕ್ತರು ಆಗಮಿಸಬೇಕು, ಸುಮಾರು 10 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದರು.

ಈ ವೇಳೆಯಲ್ಲಿ ಟ್ರಸ್ಟ್ ನ ಅಧ್ಯಕ್ಷ ರೇವಣ್ಣ, ಧರ್ಮದರ್ಶಿ ನಟರಾಜು, ಉಪಾಧ್ಯಕ್ಷ ಬಸವರಾಜು, ಕಾರ್ಯಧರ್ಮದರ್ಶಿ ವೆಂಕಟೇಶ್, ಕಾರ್ಯದರ್ಶಿ ಮುನಿರಾಜು, ಖಜಾಂಚಿ ಮೋಹನ್ ಕುಮಾರ್, ಆಡಳಿತಾಧಿಕಾರಿ ಮೋಹನ್ ಕುಮಾರ್, ಸದಸ್ಯರಾದ ರಾಜಣ್ಣ, ಮಂಜುನಾಥ್, ಇನ್ನೀತರರಿದ್ದರು.

Comments

Leave a Reply

Your email address will not be published. Required fields are marked *