ಕೊರೊನಾ 3ನೇ ಅಲೆ ಎದುರಿಸಲು ಸೂಕ್ತ ಕ್ರಮ- ಡಿಸಿ ಶ್ರೀನಿವಾಸ್

– ಆಕ್ಸಿಜನ್ ಘಟಕ ವೀಕ್ಷಣೆ

ನೆಲಮಂಗಲ(ಬೆಂಗಳೂರು): ಮಹಾಮಾರಿ ಕೊರೊನಾ ಮೂರನೇ ಅಲೆ ಬಂದರೆ ಎದುರಿಸಲು ಸೂಕ್ತ ಕೈಗೊಳ್ಳಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎಂ ಶ್ರೀನಿವಾಸ್ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು.

ಇಂದು ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ನೂತನವಾಗಿ ನಿರ್ಮಾಣವಾಗುತ್ತಿರುವ ಆಕ್ಸಿಜನ್ ಘಟಕವನ್ನ ವೀಕ್ಷಣೆ ಮಾಡಿದರು. ಈ ಹಿಂದೆ ಕೊರೊನಾ ಎರಡನೇ ಅಲೆಯ ಮೊದಲಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆಯಾಗಿತ್ತು. ಆಗ ತಕ್ಷಣವೇ ಡಾಬಸ್ ಪೇಟೆ ಆಕ್ಸಿಜನ್ ಕಂಪನಿಯಿಂದ ತುರ್ತಾಗಿ ಆಕ್ಸಿಜನ್ ಪೂರೈಕೆ ಮಾಡಿ ರೋಗಿಗಳ ನೆರವಿಗೆ ಕ್ರಮ ಕೈಗೊಳ್ಳಲಾಯಿತು ಎಂದರು.

ಈ ಬಾರಿ ಅಂತಹ ಸಮಸ್ಯೆ ಮರುಕಳಿಸದಂತೆ ಹಾಗೂ ಆಕ್ಸಿಜನ್ ಸಮಸ್ಯೆಯಾಗದಂತೆ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಘಟಕ ನಿರ್ಮಾಣ ಮಾಡಲಾಗಿದೆ. ಮುಂದಿನ ವಾರದಿಂದ ತಾಲೂಕು ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಕೆಲಸ ನಡೆಯಲಿದೆ ಎಂದರು. ಇದನ್ನೂ ಓದಿ: ಮಹಿಳಾ ಅಧಿಕಾರಿಗಳು ಅನ್ನೋದೆ ಕೆಲವರಿಗೆ ಅಡ್ವಾಂಟೇಜ್ : ಸಾ.ರಾ ಮಹೇಶ್

ಈ ವೇಳೆ ತಾಲೂಕು ಅಧಿಕಾರಿಗಳ ಜೊತೆಗೆ ನೂತನ ಆಕ್ಸಿಜನ್ ಘಟಕ ಕೆಲಸವನ್ನ ವೀಕ್ಷಣೆ ನಡೆಸಿ ಯಾವುದೇ ಸಮಸ್ಯೆ ಎದುರಾಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀನಿವಾಸ್ ಸೂಚನೆ ನೀಡಿದರು.  ಇದನ್ನೂ ಓದಿ: ರಾಯಚೂರಿನಲ್ಲಿ ಮಕ್ಕಳನ್ನು ಕಾಡುತ್ತಿದೆ ವೈರಲ್ ಫೀವರ್: ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ

Comments

Leave a Reply

Your email address will not be published. Required fields are marked *