ಕೊತ್ತಂಬರಿ ಸೊಪ್ಪು ಬೆಳೆದು 32 ದಿನದಲ್ಲಿ 13 ಸಾವಿರ ಲಾಭ ಗಳಿಸಿದ ರೈತ

ನೆಲಮಂಗಲ: ಅಲ್ಪಾವಧಿಯ ಕೃಷಿಯಲ್ಲಿ ಲಾಭ ಬರುವುದಿಲ್ಲ ಎನ್ನುವವರ ಸಂಖ್ಯೆ ಹೆಚ್ಚು. ಆದರೆ ಇಲ್ಲಿನ ಕೃಷಿಕರೊಬ್ಬರು 32 ದಿನದಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು 13 ಸಾವಿರ ಲಾಭಗಳಿಸಿ ಯಶೋಗಾಥೆ ಮೆರೆದಿದ್ದಾರೆ.

ಹೌದು. ನೆಲಮಂಗಲ ಗ್ರಾಮಾಂತರ ಭಾಗದ ಕುಲುವನಹಳ್ಳಿ ಗ್ರಾಮ ಪಂಚಾಯ್ತಿಯ ಬಿಲ್ಲಿನಕೋಟೆ ಗ್ರಾಮದ ರೈತ ರಂಗಸ್ವಾಮಿ, ತನ್ನ 2 ಗುಂಟೆ ಜಮೀನಿನಲ್ಲಿ ಕಳೆದ ಇಪ್ಪತ್ತು ದಿನಗಳ ಹಿಂದೆ ಎರಡು ಸಾವಿರ ಕೊತ್ತಂಬರಿ ಬೀಜ ಚೆಲ್ಲಿ ಲಾಭಗಳಿಸಿದ್ದಾರೆ.

ಕೃಷಿಯಲ್ಲಿ ಸದಾ ಆಸಕ್ತಿ ಹೊಂದಿರುವ ರಂಗಸ್ವಾಮಿ, ತಮ್ಮ ಕುಟುಂಬದ ಸಹಕಾರದಿಂದ 2 ಎಕರೆ 30 ಗುಂಟೆ ಜಾಗದ ಅಂಚಿನಲ್ಲಿ ಮೂರು ಸಾವಿರ ಬಂಡವಾಳ ಹೂಡಿ 16 ಸಾವಿರ ಕೊತ್ತಂಬರಿ ಬೆಳೆ ಮಾರಾಟವಾಗಿದೆ, 13 ಸಾವಿರ ಲಾಭ ಬಂದಿದೆ, ಕುಟುಂಬದ ಸದಸ್ಯರಾದ ಅಣ್ಣ ಗೋವಿಂದರಾಜು, ಅತ್ತಿಗೆ ತಾಯಮ್ಮ ಹೆಂಡತಿ ಶಾರಾದಮ್ಮರ ಸಹಕಾರ ಪಡೆದು ಸಮಗ್ರ ಕೃಷಿ ಮಾಡಿದ್ದಾರೆ, ಉಳಿದ ಜಮೀನಿನಲ್ಲಿ ಕೋಸು, ಮೆಣಸಿನಕಾಯಿ, ಜೋಳ ಬೆಳೆದಿದ್ದೇವೆ, ಕುಟುಂಬದ ಸಹಕಾರ ಕೃಷಿ ಸಾಧನೆಗೆ ಅನುಕೂಲವಾಗಿದೆ. ಇದನ್ನೂ ಓದಿ: ರಾಯನ್ ರಾಜ್ ಸರ್ಜಾಗೆ ದೇವರು ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲಿ: ಸುಮಲತಾ

ಕೊತ್ತಂಬರಿಯ ಹೊಸ ತಳಿಯ ಬೀಜವನ್ನು ತಂದು ಉಳುಮೆಯನ್ನು ಮಾಡಿ, ಬಿತ್ತನೆ ಮಾಡಿದ್ದೇವೆ, ಕಡಿಮೆ ಬೇಸಾಯ ಕ್ರಮಗಳಿಂದ ಅಧಿಕ ಇಳುವರಿ ಮಾಡಿದ್ದೇವೆ, ಜೊತೆಗೆ ರಾಸಾಯನಿಕ ಗೊಬ್ಬರ ಹಾಕದೆ ದನದ ಕೊಟ್ಟಿಗೆ ಗೊಬ್ಬರ ಹಾಕಿ ಸಂಪೂರ್ಣ ಸಾವಯವ ಮಾಡಿದ್ದೇವೆ ಎಂದು ರಂಗಸ್ವಾಮಿ ತಿಳಿಸಿದರು.

Comments

Leave a Reply

Your email address will not be published. Required fields are marked *