ನೆಲಮಂಗಲ: ಮಹಾಮಾರಿ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಇನ್ನೂ ಶಾಲೆಗಳು ಓಪನ್ ಇಲ್ಲ ಈ ನಡುವೆ ಪುಟಾಣಿ ಮಕ್ಕಳು ಪೋಷಕರ ಜೊತೆಗೆ ಕೆಲಸದಲ್ಲಿ ನಿರತರಾಗಿದ್ದರು. ಇದನ್ನ ಗಮನಿಸಿದ ಗ್ಯಾರೇಜ್ ಹಾಗೂ ಅಂಗಡಿಗಳ ಮೇಲೆ ಜಿಲ್ಲಾ ಮಕ್ಕಳ ರಕ್ಷಣೆ ಘಟಕದ ಅಧಿಕಾರಿಗಳು ದಾಳಿ ನಡೆಸಿ ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಬಳಿ ದಾಳಿ ನಡೆಸಿದ ಅಧಿಕಾರಿಗಳಿಗೆ, ಮಕ್ಕಳ ಪೋಷಕರಿಂದ ಮುತ್ತಿಗೆ ಹಾಕಿ ಘೆರಾವ್ ಮಾಡಿದ ಪ್ರಸಂಗ ಕೂಡ ಜರುಗಿದೆ. ರಕ್ಷಣೆ ಮಾಡಿದ ಮಕ್ಕಳಿಗೆ ಅಧಿಕಾರಿಗಳು ಬೆಳಗ್ಗೆಯಿಂದ ತಿಂಡಿ ಊಟ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪೋಷಕರು, ನಮ್ಮ ಮಕ್ಕಳ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಗಲಾಟೆ ಮಾಡಿದ್ದಾರೆ.

ಕೊರೊನಾ ಬಂದಾಗಿನಿಂದ ಶಾಲೆ ಇಲ್ಲ ಮಕ್ಕಳು ಪೋಲಿ ಬೀಳುತ್ತಾರೆ ನಮ್ಮ ಕೆಲಸದಲ್ಲಿ ಇದ್ದಾರೆ. ಅವರು ಯಾವ ಕೆಲಸದಲ್ಲಿ ನಿರತರಾಗಿಲ್ಲ, ಕೊರೊನಾ ಬಂದಾಗಿನಿಂದ ಅಂದಿನಿಂದ ಅಧಿಕಾರಿಗಳು ಏನ್ ಮಾಡ್ತಿದ್ರಿ ಎಂದು ಪೋಷಕರು ಪ್ರಶ್ನೆ ಮಾಡಿದಾಗ ತಬ್ಬಿಬ್ಬಾದ ಅಧಿಕಾರಿಗಳು ನಂತರ ನೆಲಮಂಗಲ ಟೌನ್ ಪೊಲೀಸರ ಮೊರೆ ಬಂದಿದ್ದಾರೆ. ಇದನ್ನೂ ಓದಿ: ಕೋಗಿಲೆ ಕಂಠದ ರಾನು ಮಂಡಲ್ ಜೀವನ ಆಧರಿಸಿ ಬರಲಿದೆ ಬಯೋಪಿಕ್

ರಕ್ಷಣೆ ಮಾಡಿದ ಮಕ್ಕಳಿಗೆ ಕೊರೊನಾ ಪರೀಕ್ಷೆ ಮಾಡಿಸಲು ಆಸ್ಪತ್ರೆಗೆ ಕರೆತಂದಾಗ ಗಲಾಟೆ ಜೋರಾಗಿ ನೆಲಮಂಗಲ ಟೌನ್ ಪೊಲೀಸರು ರಕ್ಷಣೆಗೆ ನಿಂತಾಗ, ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಮುಂದೆ ಹೈಡ್ರಾಮ ನಡೆಸಿ ನೆಲದಲ್ಲಿ ಬಿದ್ದು ಒದ್ದಾಡಿದ ಪೋಷಕರು ತಮ್ಮ ಅಳಲನ್ನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೆದ್ದಾರಿ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಟೀಲ್ ಸೂಚನೆ

Leave a Reply