ನೇಹಾ ಧುಪಿಯಾ, ಅಂಗದ್ ಬೇಡಿ ಹನಿಮೂನ್ ಫೋಟೋಗಳು ವೈರಲ್

ಮುಂಬೈ: ಬಾಲಿವುಡ್ ತಾರೆಗಳಾದ ನೇಹಾ ಧುಪಿಯಾ ಮತ್ತು ಅಂಗದ್ ಬೇಡಿ ಇಬ್ಬರ ಹನಿಮೂನ್ ಫೋಟೋಗಳು ಕಳೆದ ಎರಡು ದಿನಗಳಿಂದ ಸಿಕ್ಕಾಪಟ್ಟೆ ವೈರಲ್ ಆಗಿವೆ. ಮೇ 10ರಂದು ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದ ಜೋಡಿ, ಮದುವೆ ನಂತರ ಖಾಸಗಿಯಾಗಿ ಸಮಯ ಕಳೆದಿರಲಿಲ್ಲ. ನೇಹಾ ಖಾಸಗಿ ಚಾನೆಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಇತ್ತ ಅಂಗದ್ ಸೂರ್ಮಾ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು.

ಮದುವೆಗೆ ಮುನ್ನವೇ ಹಲವು ಕೆಲಸಗಳನ್ನು ಒಪ್ಪಿಕೊಂಡಿದ್ದ ಜೋಡಿ ಈಗ ಜಾಲಿಯಾಗಿ ಹನಿಮೂನ್ ಗೋಸ್ಕರ್ ಮಾಲ್ಡೀವ್ಸ್ ಗೆ ತೆರಳಿದೆ. ತಮ್ಮ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂ ಅಪ್ಲೋಡ್ ಮಾಡಿಕೊಂಡಿದ್ದಾರೆ.

ನವದೆಹಲಿಯಲ್ಲಿ ತುಂಬಾ ಸರಳವಾಗಿ ಪೋಷಕರು ಮತ್ತು ಆಪ್ತ ಬಂಧುಗಳು ಸಮ್ಮುಖದಲ್ಲಿ ಮದುವೆ ನಡೆದಿತ್ತು. ಅಂಗದ್ ಬೇಡಿ ಹಿರಿತೆರೆ ಮತ್ತು ಕಿರುತೆರೆ ಎರೆಡರಲ್ಲೂ ಮಿಂಚುತ್ತಿದ್ದಾರೆ. ಕಯಾ ತರಣ್, ಫಾಲ್ತು, ಉಂಗ್ಲಿ, ಪಿಂಕ್, ಡಿಯರ್ ಜಿಂದಗಿ, ಟೈಗರ್ ಜಿಂದಾ ಹೈ ಮತ್ತು ಸೂರ್ಮಾ ಸಿನಿಮಾಗಳಲ್ಲಿ ಆನಂದ್ ನಟಿಸಿದ್ದಾರೆ. ಖಾಸಗಿ ಚಾನೆಲ್‍ನ ರಿಯಾಲಿಟಿ ಶೋಗಳಿಗೆ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ.

ನೇಹಾ ಸಹ ಹಿರಿತೆರೆ ಮತ್ತು ಕಿರುತೆರೆಗಳಲ್ಲಿ ಗುರುತಿಸಿಕೊಂಡಿದ್ದಾರೆ. 2004ರಲ್ಲಿ ತೆರೆಕಂಡ ಖಯಾಮತ್: ಸಿಟಿ ಅಂಡರ್ ಥ್ರೀಟ್ ಸಿನಿಮಾ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ರು. ಜೂಲಿ, ಚುಪ್ ಚುಪ್ ಕೇ, ಸಿಂಗ್ ಇಸ್ ಕಿಂಗ್, ಕ್ಯಾ ಕೂಲ್ ಹೈ ಹಮ್, ತುಮಾರಿ ಸುಲು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತ ಕಿರುತೆರೆಯ ಹಲವು ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ, ನಿರೂಪಕರಾಗಿ ಮತ್ತು ಸ್ಪರ್ಧೆಯ ಅಭ್ಯರ್ಥಿಗಳಿಗೆ ಲೀಡರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

https://www.youtube.com/watch?v=XTX-q8RRWUc

Comments

Leave a Reply

Your email address will not be published. Required fields are marked *