ನನಗೆ ಐವರು ಭಾಯ್‍ಫ್ರೆಂಡ್, ಇದು ನನ್ನ ಆಯ್ಕೆ: ನೇಹಾ ಧುಪಿಯಾ

ಮುಂಬೈ: ಸದಾ ವಿವಾದ, ಬೋಲ್ಡ್ ಹೇಳಿಕೆಗಳಿಂದ ಸುದ್ದಿಯಾಗೋ ಬಾಲಿವುಡ್ ನಟಿ ನೇಹಾ ಧುಪಿಯಾ, ನನಗೆ ಐವರು ಭಾಯ್‍ಫ್ರೆಂಡ್ ಎಂದು ಇನ್‍ಸ್ಟಾಗ್ರಾಂ ಪೋಸ್ಟ್ ಮಾಡಿಕೊಂಡಿದ್ದಾರೆ.

ಮದುವೆಯ ಎರಡನೇ ವಾರ್ಷಿಕೊತ್ಸವ ಆಚರಿಸಿಕೊಳ್ಳುತ್ತಿರುವ ನೇಹಾ ಧುಪಿಯಾ, ಪತಿ ಜೊತೆಗಿನ ಮುದ್ದಾದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ತಮ್ಮ ಸಾಂಸರಿಕ ಜೀವನದ ಕುರಿತ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ಐವರು ಭಾಯ್‍ಫ್ರೆಂಡ್ ಗುಣವುಳ್ಳ ಓರ್ವ ವ್ಯಕ್ತಿ ನನ್ನ ಬಾಳಸಂಗಾತಿಯಾಗಿದ್ದಾನೆ ಅಂತಾ ಹೇಳಿಕೊಂಡಿದ್ದಾರೆ.

ಇನ್‍ಸ್ಟಾಗ್ರಾಂ ಪೋಸ್ಟ್: ಮುದವೆಯೇ ಎರಡನೇ ವಾರ್ಷಿಕೋತ್ಸವದ ಶುಭಾಶಯಗಳು. ಇದು ನನ್ನ ಪ್ರೀತಿಯ ಹುಡುಗನ ಜೊತೆಗಿನ ಎರಡನೇ ವರ್ಷ. ಪತಿ ಅಂಗದ್ ನನ್ನನ್ನು ಸದಾ ಬೆಂಬಲಿಸುವ ವ್ಯಕ್ತಿ. ಓರ್ವ ಒಳ್ಳೆಯ ತಂದೆ ಹಾಗೂ ಬೆಸ್ಟ್ ಫ್ರೆಂಡ್. ಇದೆಲ್ಲದರ ಜೊತೆ ತುಂಬಾನೇ ಕಾಡುವ ರೂಮ್ ಮೇಟ್. ಐದು ಭಾಯ್‍ಫ್ರೆಂಡ್‍ಗಳು ನನಗೆ ಒಬ್ಬನಲ್ಲಿ ಸಿಕ್ಕಿದ್ದಾರೆ. ಇದು ನನ್ನ ಆಯ್ಕೆ ಎಂದು ಬರೆದುಕೊಂಡಿದ್ದಾರೆ.

2018ರಲ್ಲಿ ಅಂಗದ್ ಮತ್ತು ನೇಹಾ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಯ ಪ್ರೀತಿಯ ಸಂಕೇತವಾಗಿ ಪುಟ್ಟ ರಾಜಕುಮಾರಿ ಇವರ ಮನೆಯಲ್ಲಿದ್ದಾಳೆ. ಇತ್ತೀಚೆಗೆ ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ನೇಹಾ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

https://www.instagram.com/p/CAAb7UpHQbg/?utm_source=ig_embed&utm_campaign=loading

Comments

Leave a Reply

Your email address will not be published. Required fields are marked *