ಶುಭಾನನ್ನು ನೋಡಲು ಹಳ್ಳಿಗೆ ಹೋದ ನೀತು

ಬೆಂಗಳೂರು: ಚಂದನವನದ ನಟಿ ಶುಭಾಪೂಂಜಾರನ್ನು ನೋಡಲು ಸ್ನೇಹಿತೆ ನೀತು ಅವರ ಹಳ್ಳಿಗೆ ಹೋಗಿದ್ದಾರೆ.

ನೀತು ಮತ್ತು ಶುಭಾ ಚಂದನವನದ ನಟಿಯರು. ಇವರಿಬ್ಬರು ಒಳ್ಳೆಯ ಸ್ನೇಹಿತರು. ಇತ್ತೀಚೆಗಷ್ಟೇ ಶುಭಾಪೂಂಜಾ ತಮ್ಮ ಬಹುಕಾಲದ ಗೆಳೆಯ ಸುಮಂತ್ ಜೊತೆ ಊರಿನ ಮಜಲಬೆಟ್ಟುಬೀಡುವಿನಲ್ಲಿರುವ ಮನೆಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಗೆ ನೀತು ಬಂದಿರಲಿಲ್ಲ. ಹೀಗಾಗಿ ನೀತು ಶುಭಾ ಇರುವ ಅವರ ಅಜ್ಜಿಯ ಮನೆಗೆ ಹೋಗಿ ಅವರನ್ನು ಭೇಟಿ ಮಾಡಿದ್ದಾರೆ. ನೀತು ಬಂದ ಕಾರಣ ಶುಭಾ ಫುಲ್ ಖುಷ್ ಆಗಿದ್ದು, ನೀತು ಜೊತೆಗೆ ಸಮಯ ಕಳೆದ ಫೋಟೋಗಳನ್ನು ಇನ್‍ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್

ಫೋಟೋ ಶೇರ್ ಮಾಡಿದ ಶುಭಾ, ಕೊನೆಗೂ ನಮ್ಮ ಮನೆಗೆ ನೀತು ಬಂದಿದ್ದಾಳೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ನೀತು ಸಹ ತಮ್ಮ ಇನ್‍ಸ್ಟಾ ಸ್ಟೋರಿಯಲ್ಲಿ, ವಧುವನ್ನು ಅವಳ ಊರಿನಲ್ಲೇ ಭೇಟಿಯಾದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಶುಭಾ ಮತ್ತು ನೀತು ತೋಟಕ್ಕೆ ಹೋಗಿರುವ ಫೋಟೋವನ್ನು ಇವರು ಶೇರ್ ಮಾಡಿಕೊಂಡಿದ್ದು, ಇಬ್ಬರು ಫುಲ್ ಎಂಜಯ್ ಮೂಡಿನಲ್ಲಿ ಇದ್ದಾರೆ. ಇನ್ನೊಂದು ಫೋಟೋದಲ್ಲಿ ಶುಭಾ, ಪತಿ ಸುಮಂತ್ ಮತ್ತು ಇತರೆ ಸ್ನೇಹಿತರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ: 180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ

ಶುಭಾ ತಾನು ಮದುವೆಯಾದ ಪಾರಂಪರಿಕ ಮನೆಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ಕುರಿತು ಇನ್‍ಸ್ಟಾದಲ್ಲಿ ಅವರು, ನನ್ನ ಮನೆ ಮಜಲಬೆಟ್ಟುಬೀಡು. ನಾನು ಮದುವೆಯಾದ ಮನೆಯನ್ನು ತೋರಿಸುವಂತೆ ಸಾಕಷ್ಟು ಜನ ಕೇಳಿದ್ದರು. ಇದು ನನ್ನ ಅಜ್ಜಿಯ ಮನೆ. ಇದು 800 ವರ್ಷಗಳ ಪರಂಪರೆ ಹೊಂದಿರುವ ಮನೆಯಾಗಿದೆ. ಈ ಮನೆಯಲ್ಲಿಯೇ ನಾನು ಬೆಳೆದಿದ್ದು, ನಾನು ಯಾವಾಗಲೂ ಈ ಮನೆಯಲ್ಲಿಯೇ ಮದುವೆಯಾಗಬೇಕೆಂದು ಅಂದುಕೊಂಡಿದ್ದೆ ಎಂದು ಬರೆದುಕೊಂಡಿದ್ದರು.

Comments

Leave a Reply

Your email address will not be published. Required fields are marked *