ಮೈಸೂರು: ಇತ್ತೀಚೆಗಷ್ಟೇ ತನ್ನ ವಾಟ್ಸಾಪ್ ನಂಬರಿಗೆ ಬಂದಂತಹ ಇಂದಿರಾ ಕ್ಯಾಂಟೀನ್ ಗೆ ಸಂಬಂಧಿಸಿದ ಮೆಸೇಜೊಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ವಿವಾದಕ್ಕೆ ಸಿಲುಕಿದ್ದ ಸಂಸದ ಪ್ರತಾಪ್ ಸಿಂಹ ಇದೀಗ ಕೆಂಪೇಗೌಡ ಏರ್ ಪೋರ್ಟ್ ಬಳಿ ಇಂದಿರಾ ಕ್ಯಾಂಟೀನ್ ಬೇಕು ಅಂತ ಹೇಳಿದ್ದಾರೆ.
ಹೌದು. ಟ್ವಿಟ್ಟರ್ ಮೂಲಕ ಈ ಹೇಳಿಕೆಯನ್ನು ನೀಡಿರುವ ಸಂಸದರು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಬೇಕು. ಏರ್ ಪೋರ್ಟ್‍ನಲ್ಲಿ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಆಹಾರ ದುಬಾರಿಯಾಗಿದೆ. ಹೀಗಾಗಿ ಕೆಂಪೇಗೌಡ ಏರ್ ಪೋರ್ಟ್‍ನಲ್ಲಿ ಒಂದು ಇಂದಿರಾ ಕ್ಯಾಂಟೀನ್ ತೆಗೆಯಿರಿ ಅಂತ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಯ್ತು ಸಂಸದ ಪ್ರತಾಪ್ ಸಿಂಹ ಟ್ವೀಟ್!
ಈ ಟ್ವೀಟ್ ಸಿಎಂ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಈ ಮೊದಲು ಇಂದಿರಾ ಕ್ಯಾಂಟೀನ್ ಯೋಜನೆಯನ್ನ ಟೀಕಿಸಿದ್ದರು. ಇಂದಿರಾ ಕ್ಯಾಂಟೀನ್ ಕುರಿತು ತನ್ನ ವಾಟ್ಸಾಪ್ ಗೆ ಬಂದತಂಹ ಮೆಸೇಜನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
On a serious note, @CMofKarnataka Sir, we need one Indira Canteen at Kempegowda Airport. Food is unaffordable for economy class travellers.
— Prathap Simha (@mepratap) August 23, 2017
Via whatsapp ಕಾಲ ಹೇಗಿದೆ ನೋಡಿ…….
ಚಹಾ ಮಾರುತ್ತಿದ್ದ ಮೋದಿ ಪ್ರಧಾನಮಂತ್ರಿಯಾದರು…
ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಕ್ಯಾಂಟೀನ್ ಶುರು ಮಾಡಿದ್ರು….!!!
— Prathap Simha (@mepratap) August 19, 2017

Leave a Reply