6 ಲಕ್ಷ ಹಣ ನೀಡುವಂತೆ ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್‌ಗೆ ಬೆದರಿಕೆ – ಎನ್‌ಸಿಆರ್ ದಾಖಲು

ಬೆಂಗಳೂರು: 6 ಲಕ್ಷ ರೂ. ಹಣ ನೀಡುವಂತೆ ಬೆದರಿಕೆ ಹಾಕಿದ್ದ ವ್ಯಕ್ತಿಯ ವಿರುದ್ಧ ಬಿಗ್‌ಬಾಸ್ (Biggboss) ಖ್ಯಾತಿಯ ಉದ್ಯಮಿ ಗೋಲ್ಡ್ ಸುರೇಶ್ (Gold Suresh), ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

2017ರಲ್ಲಿ ರಾಯಚೂರಿನ ಮಾನ್ವಿಯಲ್ಲಿ ಇಂಟೀರಿಯರ್ ಬ್ಯುಸಿನೆಸ್ ಆರಂಭಿಸಿದ್ದ ಗೋಲ್ಡ್ ಸುರೇಶ್, ಮೈನುದ್ದೀನ್ ಎಂಬಾತನಿಗೆ ಈ ಕೆಲಸದ ಉಸ್ತುವಾರಿ ನೀಡಿದ್ದರು. ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ರೂ ಮೈನುದ್ದೀನ್‌ಗೆ ಹಣ ಪಾವತಿಸುತ್ತಿದ್ದರು. 2017ರ ನಂತರ ಹಣದ ವ್ಯವಹಾರ ನಿಂತಿರುತ್ತದೆ ಎನ್ನಲಾಗಿದೆ. ಇದನ್ನೂ ಓದಿ: ಉಸಿರು ಸಿನಿಮಾಗಾಗಿ ಒಂದಾದ ತಿಲಕ್ & ಪ್ರಿಯಾ

ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲೆ ಇವರ ಸ್ಟೇಟಸ್ ನೋಡಿ ಮತ್ತೆ ಮೈನುದ್ದೀನ್ ಹಣ ಕೇಳಿದ್ದ. ಕರೆ ಮಾಡೋದು, ಬೆದರಿಕೆ ಹಾಕೋದು ಹಣ ಕೇಳೋದು ಮಾಡ್ತಿದ್ದ. ಇದರಿಂದ ಹೆದರಿದ ಗೋಲ್ಡ್ ಸುರೇಶ್, 50,000 ರೂ. ಹಣ ಟ್ರಾನ್ಸ್ಫರ್ ಮಾಡಿದ್ದರು. ಆ ಬಳಿಕ ಜೀವ ಭಯದಿಂದ ಮೊಬೈಲ್ ನಂಬರ್ ಚೇಂಜ್ ಮಾಡಿ, ಬೇರೆ ಬೇರೆ ಕಡೆ ಓಡಾಡಿದ್ದರು ಎಂದಿದ್ದಾರೆ. ಇದನ್ನೂ ಓದಿ: ‘ಪೆನ್‌ ಡ್ರೈವ್‌’ಗಾಗಿ ಕಿಶನ್ ಜೊತೆ ಜಬರ್ದಸ್ತ್ ಕುಣಿದ ತನಿಷಾ ಕುಪ್ಪಂಡ

ಮಂಗಳವಾರ ಮತ್ತೆ ಕರೆ ಮಾಡಿದ ಆರೋಪಿ 6 ಲಕ್ಷ ರೂ. ಹಣ ಕೊಡುವಂತೆ ಜೀವ ಬೆದರಿಕೆ ಹಾಕಿದ್ದ. ಜೀವ ಬೆದರಿಕೆ ಹಿನ್ನೆಲೆ ಗೋವಿಂದರಾಜನಗರ ಪೊಲೀಸ್ (Govindarajanagara Police) ಠಾಣೆಗೆ ದೂರು ನೀಡಿದ್ದು, ಪೊಲೀಸರು ಎನ್‌ಸಿಆರ್ ದಾಖಲಿಸಿ ತನಿಖೆ ನಡೆಸ್ತಿದ್ದಾರೆ.