ಸಮೀರ್ ವಾಂಖೆಡೆ ವಿರುದ್ಧ ಲಂಚದ ಆರೋಪ – ತನಿಖೆಗೆ ಸೂಚನೆ

ಮುಂಬೈ: ಮುಂಬೈನಲ್ಲಿ ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ ಪಾರ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ತನಿಖಾಧಿಕಾರಿ ಸಮೀರ್ ವಾಂಖೆಡೆ ವಿರುದ್ಧವೇ ಈಗ ತನಿಖೆಗೆ ಸೂಚಿಸಲಾಗಿದೆ.

ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ 25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಹಿನ್ನಲೆಯಲ್ಲಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ವಿಜಿಲೆನ್ಸ್ (ವಿಚಕ್ಷಣ ದಳ) ತನಿಖೆಗೆ ಆದೇಶಿಸಿದೆ. ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ – NCB ಮುಖ್ಯಸ್ಥರ ವಿರುದ್ಧ ಗಂಭೀರ ಆರೋಪ

ಎನ್‍ಸಿಬಿ ಪ್ರಧಾನ ಕಛೇರಿಯಲ್ಲಿ ಈ ವಿಚಾರಣೆ ನಡೆಯಲಿದ್ದು ಉತ್ತರ ಪ್ರದೇಶದ ಎನ್‍ಸಿಬಿ ಉಪ ಮಹಾನಿರ್ದೇಶಕ (ಡಿಡಿಜಿ) ಜ್ಞಾನೇಶ್ವರ್ ಸಿಂಗ್ ಸಮೀರ್ ವಾಖೆಂಡೆ ವಿಚಾರಣೆ ನಡೆಸಲಿದ್ದಾರೆ. ಜ್ಞಾನೇಶ್ವರ್ ಸಿಂಗ್ ಮಾದಕದ್ರವ್ಯ ವಿರೋಧಿ ಏಜೆನ್ಸಿಯ ಮುಖ್ಯ ಜಾಗೃತ ಅಧಿಕಾರಿ (ಸಿವಿಒ) ಕೂಡ ಆಗಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜ್ಞಾನೇಶ್ವರ್ ಸಿಂಗ್, ನಮ್ಮದು ವೃತ್ತಿಪರ ಸಂಸ್ಥೆ, ನಮ್ಮ ಸಿಬ್ಬಂದಿ ವಿರುದ್ಧ ಯಾವುದೇ ಆರೋಪಗಳು ಕೇಳಿ ಬಂದರು ನಾವು ವಿಚಾರಣೆಗೆ ಮುಕ್ತರಾಗಿದ್ದೇವೆ. ವಿಚಾರಣೆ ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿರುತ್ತದೆ ಎಂದಿದ್ದಾರೆ. ಸಮೀರ್ ವಾಂಖೆಡೆ ಪ್ರಕರಣ ತನಿಖೆ ಮುಂದುವರಿಸಿವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಇದು ಅಕಾಲಿಕ ಪ್ರಶ್ನೆ ಎಂದಷ್ಟೇ ಹೇಳಿದ್ದಾರೆ. ಇದನ್ನೂ ಓದಿ: ಸಿಗದ ಜಾಮೀನು – ಜೈಲಿನಲ್ಲಿ ರಾಮನ ಮೊರೆ ಹೋದ ಆರ್ಯನ್ ಖಾನ್

ಡ್ರಗ್ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್, ಆರ್ಯನ್ ಖಾನ್ ಬಿಡುಗಡೆಗೆ 25 ಕೋಟಿ ರೂ ಬಿಡುಗಡೆ ಡಿಮ್ಯಾಂಡ್ ಮಾಡಲಾಗಿದೆ. ಕನಿಷ್ಠ 18 ಕೋಟಿ ನೀಡಿದರೆ ಆರ್ಯನ್ ಖಾನ್ ಬಿಡುಗಡೆ ಮಾಡಲಾಗುವುದು, ಇದರಲ್ಲಿ 8 ಕೋಟಿ ಹಣ ತನಿಖಾಧಿಕಾರಿ ಸಮೀರ್ ವಾಂಖೆಡೆ ನೀಡಬೇಕಿದೆ ಎಂದು ಆರೋಪಿಸಿದ್ದರು. ಹಣಕ್ಕಾಗಿ ಸಮೀರ್ ವಾಂಖೆಡೆ ಕೆಪಿ ಗೋಸಾವಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು.

ಇಂದು ಮುಂಬೈ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದ ಪ್ರಭಾಕರ್ ಸೈಲ್, ಜೀವ ಭಯವಿದ್ದು ರಕ್ಷಣೆ ನೀಡುವಂತೆ ದೂರು ನೀಡಿದ್ದರು. ಇದಾದ ಬೆನ್ನಲೆ ಸಮೀರ್ ವಾಂಖೆಡೆ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ಮಗನನ್ನು ಭೇಟಿಯಾದ ಶಾರೂಖ್

Comments

Leave a Reply

Your email address will not be published. Required fields are marked *