ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಯನತಾರಾ

ಸೌತ್ ನಟಿ ನಯನತಾರಾ ‘ಜವಾನ್’ (Jawan) ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ ಸಕ್ಸಸ್‌ಫುಲ್ ನಟಿಯಾಗಿ ಮಿಂಚ್ತಿದ್ದಾರೆ. ಮೊದಲ ಸಿನಿಮಾ ಗೆದ್ದ ಖುಷಿಯಲ್ಲಿ ಈಗ ಹೊಸ ಪ್ರಾಜೆಕ್ಟ್‌ವೊಂದನ್ನ ಒಪ್ಪಿಕೊಂಡಿದ್ದಾರೆ. ಬಾಲಿವುಡ್‌ನ ಖ್ಯಾತ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಜೊತೆ ನಟಿ ಕೈಜೋಡಿಸಿದ್ದಾರೆ.

ಬೈಜು ಬವ್ರಾ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಣ್‌ವೀರ್ ಸಿಂಗ್- ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಈ ನಡುವೆ ಮುಖ್ಯ ಪಾತ್ರವೊಂದಕ್ಕೆ ಬನ್ಸಾಲಿ ಟೀಮ್, ನಯನತಾರಾ (Nayanatara) ಜೊತೆ ಮಾತುಕತೆ ನಡೆಸಿದ್ದಾರೆ. ಕಥೆ ಕೇಳಿ ಅವರು ಕೂಡ ಓಕೆ ಎಂದಿದ್ದಾರಂತೆ.

‘ಗಂಗೂಬಾಯಿ ಕಥಿಯಾವಾಡಿ’ ಚಿತ್ರದ ಸೂಪರ್ ಸಕ್ಸಸ್ ನಂತರ ‘ಹೀರಾಮಂಡಿ’ ಚಿತ್ರದ ಬಳಿಕ ಬೈಜು ಬವ್ರಾ ಪ್ರಾಜೆಕ್ಟ್ ಅನ್ನು ಬನ್ಸಾಲಿ ಕೈಗೆತ್ತಿಕೊಂಡಿದ್ದಾರೆ. ಸದ್ಯದಲ್ಲೇ ಸಿನಿಮಾದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ. ಇದನ್ನೂ ಓದಿ:ರಾಧಿಕಾ ಕುಮಾರಸ್ವಾಮಿ ಸಹೋದರ ಚಿತ್ರರಂಗಕ್ಕೆ ಎಂಟ್ರಿ

1952ರಲ್ಲಿ ‘ಬೈಜು ಬವ್ರಾ’ ಚಿತ್ರವನ್ನು ವಿಜಯ್ ಭಟ್ ಅವರು ಡೈರೆಕ್ಷನ್ ಮಾಡಿದ್ದರು. ಭರತ್ ಭೂಷಣ್- ಮೀನಾ ಕುಮಾರಿ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಸಂಗೀತ ಸ್ಪರ್ಧೆಯಲ್ಲಿ ತಾನ್ಸೇನ್‌ನ ಸೋಲಿಸಬೇಕು ಎಂದು ಪಣ ತೊಡುವ ಬೈಜುವಿನ ಕಥೆಯಾಗಿದೆ. ಈ ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ರಣ್‌ವೀರ್‌ ಸಿಂಗ್‌-ಆಲಿಯಾ ಭಟ್‌ (Alia Bhatt) ಮತ್ತು ನಯನತಾರಾ ಜೊತೆಯಾಗಿ ನಟಿಸೋದು ನಿಜವೇ ಆಗಿದ್ದಲ್ಲಿ, ಸಿನಿರಸಿಕರಿಗೆ ಹಬ್ಬವೋ ಹಬ್ಬ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]