ಪತಿ ವಿಘ್ನೇಶ್‌ಗೆ ದುಬಾರಿ ಬಂಗ್ಲೆ ಗಿಫ್ಟ್ ಮಾಡಿದ ನಯನತಾರಾ: ಬಂಗ್ಲೆಯ ಮೊತ್ತವೆಷ್ಟು ಗೊತ್ತಾ?

ಸೌತ್ ಸಿನಿಮಾರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ 7 ವರ್ಷಗಳ ಪ್ರೀತಿಯ ನಂತರ ಆಪ್ತರ ಸಮ್ಮುಖದಲ್ಲಿ  ಅದ್ದೂರಿಯಾಗಿ ಮದುವೆ ನೆರವೇರಿತು. ಜೂನ್ 9ರಂದು ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ಅದ್ದೂರಿ ಮದುವೆಯಲ್ಲಿ ವಿಘ್ನೇಶ್ ಶಿವನ್, ನಯನತಾರಾಗೆ ಮಾಂಗಲ್ಯ ಧಾರಣೆ ಮಾಡಿದರು. ಗ್ರ್ಯಾಂಡ್ ಆಗಿ ನಡೆದ ಮದುವೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಸ್ಟಾರ್ ಜೋಡಿಯ ಮದುವೆಯಲ್ಲಿ ದಕ್ಷಿಣ ಭಾರತದ ಖ್ಯಾತ ಕಲಾವಿದರಾದ ರಜನಿಕಾಂತ್, ದಳಪತಿ ವಿಜಯ್ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಿದ್ದರು. ಬಾಲಿವುಡ್ ಸ್ಟಾರ್ ಶಾರುಖ್ ಖಾನ್, ಬೋನಿ ಕಪೂರ್ ಸೇರಿದಂತೆ ಅನೇಕ ಗಣ್ಯರು ಮದುವೆಯಲ್ಲಿ ಬಂದು ನಯನತಾರಾ ಮತ್ತು ವಿಘ್ನೇಶ್ ಜೋಡಿಗೆ ಶುಭಹಾರೈಸಿದರು. ನಯನತಾರಾ ಕೆಂಪು ಸೀರೆ ಮತ್ತು ರಾಯಲ್ ಆಭರಣದಲ್ಲಿ ಮಿಂಚಿದ್ದರು. ವಿಘ್ನೇಶ್ ಶಿವನ್ ಬಿಳಿ ಮತ್ತು ಗೋಲ್ಡ್ ಬಣ್ಣದ ಪಂಚೆ, ಕುರ್ತಾ ಮತ್ತು ಶಾಲ್ ಧರಿಸಿದ್ದರು. ಇಬ್ಬರ ಮದುವೆ ಲುಕ್‌ಗೆ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ. 7 ಎಳೆಯ ಈ ಜ್ಯುವೆಲ್ಲರಿಯನ್ನು ಮುತ್ತು, ವಜ್ರ ಮತ್ತು ವಿವಿಧ ದುಬಾರಿ ಸ್ಟೋನ್‌ಗಳನ್ನು ಬಳಸಿ ಮಾಡಲಾಗಿದೆ.

ದುಬಾರಿ ಮದುವೆ ವೆಚ್ಚದಲ್ಲಿ ಮದುವೆಯಾಗಿರುವ ಈ ಜೋಡಿ ಒಬ್ಬರಿಗೊಬ್ಬರು ನೀಡಿರುವ ಗಿಫ್ಟ್ ಕೂಡ ಅಷ್ಟೆ ದುಬಾರಿಯಾಗಿದೆ. ನಯನತಾರಾ ಮದುವೆಗೆ ಧರಿಸಿದ್ದ ಅಭರಣವನ್ನು ವಿಘ್ನೇಶ್ ಶಿವನ್ ಗಿಫ್ಟ್ ಮಾಡಿದ್ದಾರೆ. ಒಟ್ಟು 5 ಕೋಟಿ ಬೆಲೆಬಾಳುವ ಒಡವೆಯನ್ನು ಧರಿಸಿದ್ದರು. ಇನ್ನು 5 ಕೋಟಿ ಮೌಲ್ಯದ ರಿಂಗ್ ಅನ್ನು ವಿಘ್ನೇಶ್ ಶಿವನ್ ಉಡುಗೊರೆಯಾಗಿ ನೀಡಿದ್ದಾರೆ. ನಯನತಾರಾ ಕೂಡ ಪತಿ ವಿಘ್ನೇಶ್ ಶಿವನ್‌ಗೆ 20 ಕೋಟಿ ಬೆಲೆಬಾಳುವ ಬಂಗ್ಲೆಯನ್ನು ಗಿಫ್ಟ್ ನೀಡಿದ್ದಾರೆ. ಇದನ್ನೂ ಓದಿ: ತಂದೆಯ ಬ್ಯಾನರ್ ನಲ್ಲೇ ಮತ್ತೆ ನಟಿಸಲಿದ್ದಾರಾ ನಿಖಿಲ್ ಕುಮಾರಸ್ವಾಮಿ?: ಯದುವೀರ ಡ್ರಾಪ್?

ಸದ್ಯ ನಟಿ ನಯನತಾರಾ ಶಾರುಖ್ ಖಾನ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಟ್ಲೀ ನಿರ್ದೇಶನದ `ಜವಾನ್’ ಸಿನಿಮಾದಲ್ಲಿ ನಯನತಾರಾ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ಕನ್ನಡ ಸಿನಿರಸಿಕರಿಗೆ ಹತ್ತಿರವಾಗುತ್ತಿದ್ದಾರೆ. ಇನ್ನು ಮದುವೆ ಬಳಿಕವೂ ನಯನತಾರಾ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುತ್ತಾರೆ. ಹೊಸ ಬಗೆಯ ಪಾತ್ರಗಳ ಮೂಲಕ ಮೋಡಿ ಮಾಡಲಿದ್ದಾರೆ.

Comments

Leave a Reply

Your email address will not be published. Required fields are marked *