ಅಮೆರಿಕ, ಕೊರಿಯಾದಂತೆ ಪಾಕ್, ಭಾರತ ಯಾಕೆ ಮಾತುಕತೆ ನಡೆಸಬಾರದು: ಶರೀಫ್ ಸಹೋದರ ಟ್ವೀಟ್

ನವದೆಹಲಿ: ಉತ್ತರ ಕೊರಿಯಾ ಹಾಗೂ ಅಮೆರಿಕ ಪರಸ್ಪರ ಮಾತುಕತೆ ನಡೆಸಿದಂತೆ ಭಾರತ ಮತ್ತು ಪಾಕಿಸ್ತಾನ ಮಾತುಕತೆ ನಡೆಸಲಿ ಎಂದು ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ರ ಸಹೋದರ ಶಹಬಾಜ್ ಶರೀಫ್ ಹೇಳಿದ್ದಾರೆ.

ಏಳು ದಶಕಗಳ ವೈರತ್ವವನ್ನು ಬದಿಗೊತ್ತಿ ಅಮೆರಿಕ-ಉತ್ತರ ಕೊರಿಯಾ ಪರಸ್ಪರ ಮಾತುಕತೆಗೆ ಬಂದಿವೆ. ಹಲವು ವರ್ಷಗಳ ಕಾಲ ತಮ್ಮ ಶಕ್ತಿ ಪ್ರದರ್ಶನಗಳಲ್ಲಿಯೇ ನಿಂತರೂ ಸದ್ಯ ಎರಡು ರಾಷ್ಟ್ರಗಳು ಚರ್ಚೆ ನಡೆಸಿದ ಮಾದರಿಯಲ್ಲೇ ಭಾರತ ಹಾಗೂ ಪಾಕಿಸ್ತಾನ ಯಾಕೆ ಮಾತುಕತೆ ನಡೆಸಬಾರದು ಎಂದು ಅವರು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಶಹಬಾಜ್ ಶರೀಫ್, ಮತ್ತೊಮ್ಮೆ ಭಾರತವನ್ನು ಗುರಿ ಮಾಡಿರುವ ಅವರು ಭಾರತ ಜಮ್ಮು ಕಾಶ್ಮೀರ ಪ್ರದೇಶ ಮೇಲೆ ಆಕ್ರಮಣ ಮಾಡಿದೆ. ಇದನ್ನ ಕಾಶ್ಮೀರದ ಜನರು ವಿರೋಧಿಸಿದ್ದಾರೆ ಎಂದು ತಮ್ಮ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

ಕಾಶ್ಮೀರ ಭಾಗದಲ್ಲಿ ಶಾಂತಿ ಕಾಪಾಡುವುದು ಅಗತ್ಯವಾಗಿದ್ದು, ಜಗತ್ತಿನ ಸಮುದಾಯವು ಇನ್ನು ಗಮನಿಸಬೇಕಾಗಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ ಒಳಪಟ್ಟಂತೇ ಹಲವು ವರ್ಷಗಳಿಂದ ಇರುವ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ನಿಯಮಗಳಂತೆ ಬಗೆಹರಿಸಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಸಿಂಗಾಪುರದಲ್ಲೇ ಟ್ರಂಪ್-ಕಿಮ್ ಭೇಟಿಯಾಗಿದ್ದು ಯಾಕೆ?

Comments

Leave a Reply

Your email address will not be published. Required fields are marked *