ಶಿವಣ್ಣನ ಮುಂದೆ ವಿಲನ್ ಆಗಿ ಅಬ್ಬರಿಸಲಿದ್ದಾರೆ ನವೀನ್ ಶಂಕರ್

ಟ ನವೀನ್ ಶಂಕರ್ (Naveen Shankar) ಅವರು ಗುರುದೇವ ಹೊಯ್ಸಳ, ಸಲಾರ್ ಸಿನಿಮಾದಲ್ಲಿ ವಿಲನ್ ಆಗಿ ಗೆದ್ದ ಮೇಲೆ ಶಿವರಾಜ್‌ಕುಮಾರ್ ಮುಂದೆ ಅಬ್ಬರಿಸಲು ಸಜ್ಜಾಗಿದ್ದಾರೆ. ಶಿವಣ್ಣನ (Shivarajkumar) ಮುಂದಿನ ಚಿತ್ರದಲ್ಲಿ ಖಳನಟನಾಗಿ ಮಿಂಚಲಿದ್ದಾರೆ. ಇದನ್ನೂ ಓದಿ:‘ಕಾಂತಾರ 1’ ಸಿನಿಮಾದ ಬಿಗ್‌ ಅಪ್‌ಡೇಟ್‌- 4ನೇ ಶೆಡ್ಯೂಲ್‌ ಶೂಟಿಂಗ್‌ಗೆ ಡೇಟ್‌ ಫಿಕ್ಸ್

‘ಗುಳ್ಟು’ ಹೀರೋ ನವೀನ್ ಶಂಕರ್ ಪ್ರತಿಭಾನ್ವಿತ ಕಲಾವಿದರ ಅದರಲ್ಲಿ ಎರಡು ಮಾತಿಲ್ಲ. ಹೀರೋ ಆಗಿ ಕಾಣಿಸಿಕೊಳ್ಳಬೇಕು ಎಂಬುದಕ್ಕಿಂತ ನಟನೆಗೆ ಸ್ಕೋಪ್ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ತಿದ್ದಾರೆ. ಶಿವಣ್ಣ 131ನೇ (Shivanna 131) ಸಿನಿಮಾದಲ್ಲಿ ಇಂಟೆನ್ಸ್ ಮತ್ತು ಇಂಟೆಲಿಜೆಂಟ್ ಆದ ಕ್ರೂರ ಖಳನಾಯಕನ ಪಾತ್ರ ಇದಾಗಿದೆ. ‘ಗುರುದೇವ ಹೊಯ್ಸಳ’ ಮತ್ತು ‘ಸಲಾರ್’ ಸಿನಿಮಾಗಳಿಗಿಂತ ಈ ಚಿತ್ರದ ಪಾತ್ರ ವಿಭಿನ್ನವಾಗಿದೆ. ಆದರೆ ಈ ಚಿತ್ರದಲ್ಲಿ ಅವರು ವೈಲೆಂಟ್ ವಿಲನ್ ಅನ್ನು ನೋಡಬಹುದು. ಬಹಳ ವಿಶೇಷವಾದ ಪಾತ್ರ ಇದಾಗಿದ್ದು, ಅಭಿನಯಕ್ಕೆ ಹೆಚ್ಚು ಸ್ಕೋಪ್ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಚಿತ್ರದಲ್ಲಿ ಶಿವಣ್ಣ, ನವೀನ್ ಶಂಕರ್ ಜೊತೆ ಎಸ್.ಜೆ ಸೂರ್ಯ ಮತ್ತು ಅಚ್ಯುತ್ ಕುಮಾರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ತಮಿಳು ಡೈರೆಕ್ಟರ್ ಕಾರ್ತಿಕ್ ಅದ್ವೈತ್ (Karthik Adwait) ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಶಿವಣ್ಣ ಮತ್ತು ನವೀನ್ ಶಂಕರ್ ಒಟ್ಟಿಗೆ ನಟಿಸುತ್ತಿರುವ ಕಾರಣ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

ಅಂದಹಾಗೆ, 2018ರಲ್ಲಿ ‘ಗುಳ್ಟು’ ಸಿನಿಮಾದ ಹೀರೋ ಆಗಿ ನವೀನ್ ಶಂಕರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸೋನು ಗೌಡ ನಾಯಕಿಯಾಗಿ ನಟಿಸಿದ್ದರು.