ದೆಹಲಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಅರೆಸ್ಟ್ – ಎಕೆ 47, ಮದ್ದುಗುಂಡುಗಳು ವಶಕ್ಕೆ

Delhi terrorist

ನವದೆಹಲಿ: ಪಾಕಿಸ್ತಾನದ ಭಯೋತ್ಪಾದಕನನ್ನು ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಭಯೋತ್ಪಾದಕ ನಕಲಿ ದಾಖಲೆಗಳನ್ನು ಹೊಂದಿದ್ದು, ದೆಹಲಿಯಲ್ಲಿ ವಾಸವಾಗಿದ್ದ. ಇದೀಗ ದೆಹಲಿಯ ಲಕ್ಷ್ಮೀನಗರ ಪ್ರದೇಶದಿಂದ ದೆಹಲಿಯ ವಿಶೇಷ ಸೆಲ್ ಪಾಕಿಸ್ತಾನಿ ಭಯೋತ್ಪಾದನನ್ನು ಸೆರೆಹಿಡಿದಿದ್ದಾರೆ. ಇದೀಗ ಆರೋಪಿಯಿಂದ ಎಕೆ-47 ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದಾಗಿ ಈ ಬಾರಿ ನವರಾತ್ರಿಯಲ್ಲಿ ನಡೆಯಬೇಕಿದ್ದ ಭೀಕರ ಭಯೋತ್ಪಾದ ದಾಳಿಯೊಂದು ತಪ್ಪಿದಂತಾಗಿದೆ. ಇದನ್ನೂ ಓದಿ: 1960ರಲ್ಲಿ ಧರ್ಮೇಂದ್ರ ಖರೀದಿಸಿದ ಮೊದಲ ಕಾರಿನ ಬೆಲೆ ಎಷ್ಟು ಗೊತ್ತಾ?

ಬಂಧಿತ ಪಾಕಿಸ್ತಾನಿ ಭಯೋತ್ಪಾದಕನನ್ನು ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದ್ದು, ಈತ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿಯಾಗಿದ್ದಾನೆ. ಮೊಹಮ್ಮದ್ ಅಶ್ರಫ್ ದೆಹಲಿಯ ಶಾಸ್ತ್ರಿ ನಗರದಲ್ಲಿ ಅಲಿ ಅಹ್ಮದ್ ನೂರಿ ಹೆಸರಿನಲ್ಲಿ ವಾಸಿಸುತ್ತಿದ್ದನು. ವಿಚಾರಣೆ ವೇಳೆ, ಮೊಹಮ್ಮದ್ ಅಶ್ರಫ್ ಭಯೋತ್ಪಾದಕ ಸಂಘಟನೆ ಐಎಸ್‍ಐ ಜೊತೆ ಸಂಪರ್ಕ ಹೊಂದಿದ್ದು, ಕೆಲವು ದಿನಗಳ ಕಾಲ ಕಾಶ್ಮೀರದಲ್ಲಿ ಕೂಡ ತಂಗಿದ್ದ ವಿಚಾರವನ್ನು ತಿಳಿಸಿದ್ದಾನೆ. ಇದನ್ನೂ ಓದಿ: ಪುಟ್ಕೋಸಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಸರ್ಕಾರ ತೆಗೆದ ಮಹಾನ್ ನಾಯಕ – ಸಿದ್ದು ವಿರುದ್ಧ ಹೆಚ್‍ಡಿಕೆ ವಾಗ್ದಾಳಿ

ಇದೀಗ ಪೊಲೀಸರು ಬಂಧಿತ ಭಯೋತ್ಪಾದಕನಿಂದ ಒಂದು ಎಕೆ -47 ದಾಳಿ ರೈಫಲ್ ಜೊತೆಗೆ ಒಂದು ಹೆಚ್ಚುವರಿ ಮ್ಯಾಗಜೀನ್, ಒಂದು ಹ್ಯಾಂಡ್ ಗ್ರೆನೇಡ್, 50 ಸುತ್ತುಗಳಿರುವ ಎರಡು ಅತ್ಯಾಧುನಿಕ ಪಿಸ್ತೂಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *