ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಜಗ್ಗೇಶ್ ಕೊಟ್ಟ ಡಿಫರೆಂಟ್ ಗಿಫ್ಟ್

ಸ್ಯಾಂಡಲ್‍ವುಡ್ ನವರಸ ನಾಯಕ ಜಗ್ಗೇಶ್ ಹಾಗೂ ಪರಿಮಳ ಅವರಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ವೈವಾಹಿಕ ಜೀವನಕ್ಕೆ ಕಾಲಿಟ್ಟು 38 ವರ್ಷ ಕಳೆದಿರುವ ಸಂದರ್ಭದಲ್ಲಿ ನಟ ಜಗ್ಗೇಶ್ ಇದೇ ಸಂತಸದಲ್ಲಿ ಒಂದಷ್ಟು ಫೋಟೋಗಳನ್ನು ಕೋಲಾಜ್ ಮಾಡಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

ಜಗ್ಗೇಶ್ ಅವರು ಆಗಾಗ ಕೆಲವು ಸಂದರ್ಶಗಳಲ್ಲಿ ತಮ್ಮ ಇಂಟ್ರೆಸ್ಟಿಂಗ್ ಲವ್ ಸ್ಟೋರಿಯನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಜಗ್ಗೇಶ್ ಮನೆಯವರ ವಿರೋಧದ ನಡುವೆಯೂ ಪರಿಮಳ ಅವರ ಕೈಹಿಡಿದಿದ್ದು, ಈ ಜೋಡಿಯ ಪ್ರೇಮ್ ಕಹಾನಿ ವೆರಿ ಡಿಫರೆಂಟ್. 1984ರ ಮಾರ್ಚ್ 22ರಂದು ಸಪ್ತಪದಿ ತುಳಿದ ಜಗ್ಗೇಶ್ ಹಾಗೂ ಪರಿಮಳ ಅವರ ದಾಂಪತ್ಯಕ್ಕೆ ಇಂದಿಗೆ ಮೂರು ಮುಕ್ಕಾಲು ದಶಕ.

ಸದ್ಯ ಈ ವಿಶೇಷ ದಿನದಂದು ಜಗ್ಗೇಶ್ ಅವರು ತಮ್ಮ ಮತ್ತು ಅವರ ಪತ್ನಿಯ ಬಾಲ್ಯದ ಫೋಟೋ, ತಮ್ಮ ವಿವಾಹದ ಫೋಟೋ, ಮಕ್ಕಳಾದ ಗುರುರಾಜ್, ಯತಿರಾಜ್ ಫೋಟೋ, ಹಿರಿಯ ಪುತ್ರ ಗುರುರಾಜ್ ವಿವಾಹದ ಫೋಟೋ, ಮೊಮ್ಮಗ ಅರ್ಜುನ್ ಸೇರಿದಂತೆ ಫ್ಯಾಮಿಲಿ ಫೋಟೋವನ್ನು ಕೋಲಾಜ್ ಮಾಡಿರುವ ವೀಡಿಯೋವನ್ನು ಪತ್ನಿಗೆ ಗಿಫ್ಟ್ ಎಂಬಂತೆ ನೀಡಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

ಈ ಸುಂದರವಾದ ವೀಡಿಯೋ ಜೊತೆಗೆ ಇಂದು ಪರಿಮಳನಿಗೆ ತಾಳಿ ಕಟ್ಟಿ 38ನೆ ವರ್ಷ. ಪರಿಮಳಚಾರ್ಯರು, ಗುರುರಾಜ, ಯತಿರಾಜ ರಾಯರ ಸಂಬಂಧಿತ ನಾಮಾಂಕಿತ. ಅರ್ಜುನ, ಕೃಷ್ಣನ ಪ್ರಿಯ ಸಖ. ರಾಯರು ಕೃಷ್ಣನ ಪ್ರಿಯ ಸಖ. ಇಷ್ಟು ಹೆಸರು ದಿನ ಬಳಸಲು ರಾಯರು ನನ್ನ ಬದುಕಿಗೆ ನೀಡಿದ ದೇಣಿಗೆ. ಪರಿಮಳ ಮಡದಿ, ಗುರುರಾಜ ಯತಿರಾಜ ಮಕ್ಕಳು, ಅರ್ಜುನ ಮೂಮ್ಮಗ ಶುಭ ಮಂಗಳವಾರ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

Comments

Leave a Reply

Your email address will not be published. Required fields are marked *