ಆ.8ರಿಂದ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಶುರು

ನ್ಯಾಷನಲ್ ಸ್ಟಾರ್ ಯಶ್ (Yash) ನಟನೆಯ ‘ಟಾಕ್ಸಿಕ್’ (Toxic Film) ಸಿನಿಮಾ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಆ.8ರಿಂದ ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಈ ಮೂಲಕ ಯಶ್‌ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ:ನಾನು ಭೂಮಿಯ ಮೇಲಿನ ಅದೃಷ್ಟ ವ್ಯಕ್ತಿ: ವಿಕ್ರಮ್ ಭೇಟಿಯಾದ ಡಿವೈನ್ ಸ್ಟಾರ್

ನಿನ್ನೆ (ಆ.6) ಉಜಿರೆಯ ಸುರ್ಯ ದೇಗುಲಕ್ಕೆ ಪತ್ನಿ ರಾಧಿಕಾ (Radhika Pandit) ಜೊತೆ ಯಶ್ ಭೇಟಿ ಕೊಟ್ಟ ಬೆನ್ನಲ್ಲೇ ‘ಟಾಕ್ಸಿಕ್’ ಸಿನಿಮಾ ಚಿತ್ರೀಕರಣ ಶುರು ಮಾಡಲು ಸಿದ್ಧತೆ ನಡೆಯುತ್ತಿದೆ. ಯಶ್‌ಗೆ 8 ಲಕ್ಕಿ ನಂಬರ್ ಆಗಿರೋ ಕಾರಣ ಈ ದಿನ ‘ಟಾಕ್ಸಿಕ್’ ಚಿತ್ರಕ್ಕೆ ಚಾಲನೆ ಸಿಗಲಿದೆ.

ಯಶ್‌ ಪಾಲಿಗೆ 8ನೇ ತಾರೀಕು ವಿಶೇಷವಾಗಿದೆ. 2+0+2+4 ಈ ಇಸವಿಯನ್ನು ಕೂಡಿದಾಗ 8 ಸಂಖ್ಯೆ ಬರುತ್ತದೆ. ಹಾಗಾಗಿ 2024ರ 8ನೇ ತಿಂಗಳಾದ ಆಗಸ್ಟ್‌ 8ರಂದು ಟಾಕ್ಸಿಕ್‌ ಚಿತ್ರದ ಶೂಟಿಂಗ್‌ ಚಾಲನೆ ನೀಡಲು ಮುಂದಾಗಿದ್ದಾರೆ. ನಾಳೆಯಿಂದ (ಆ.8) ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಸಿನಿಮಾ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದು ಸಿನಿಮಾ ವಿಮರ್ಶಕರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಅಂದಹಾಗೆ, ಯಶ್‌ ಜನ್ಮ ದಿನಾಂಕ ಜ.8 ಮತ್ತು ಅವರು ಟಾಕ್ಸಿಕ್‌ ಸಿನಿಮಾ ಕೂಡ ಡಿ.8ರಂದು ಘೋಷಣೆ ಮಾಡಿದ್ದರು.

ಈಗಾಗಲೇ ಕಿಯಾರಾ ಅಡ್ವಾಣಿ (Kiara Advani), ನಯನತಾರಾ, ಹುಮಾ ಖುರೇಶಿ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ. ಸದ್ಯದಲ್ಲೇ ಈ ಕುರಿತು ಅಧಿಕೃತ ಮಾಹಿತಿ ಸಿಗಲಿದೆ. ಈಗ ಚಿತ್ರದ ಶೂಟಿಂಗ್ ಅಪ್‌ಡೇಟ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಇನ್ನೂ ಯಶ್ ಈ ಸಿನಿಮಾಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಸ್ವತಃ ಯಶ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವರ ಜೊತೆ ಕೆವಿಎನ್ ಸಂಸ್ಥೆ ಕೂಡ ಕೈಜೋಡಿಸಿದೆ.